ಚೆನ್ನಾಗಿ ಕಲಿತು ಅಪ್ಪ ಅಮ್ಮನ ನೋಡಿಕೊಳ್ತೀನಿ ಅಂತಿದ್ಳು ಸರ್‌:ಕಣ್ಣೀರಿಟ್ಟ ಹೆತ್ತ ಕರುಳು

Edited By:

Updated on: Feb 11, 2026 | 7:52 PM

ಅನ್ಯಕೋಮಿನ ಯುವಕನೊಂದಿಗೆ ಹಿಂದೂ (Hindu) ಯುವತಿ ಪರಾರಿಯಾಗಿರುವ ಘಟನೆ ಮಂಗಳೂರಿನ (Mangaluru) ಸುರತ್ಕಲ್​​ನಲ್ಲಿ ನಡೆದಿದೆ. ಸುರತ್ಕಲ್​ನ ಮುಕ್ಕ ಕಾಲೇಜಿನಲ್ಲಿ ಓದುತ್ತಿದ್ದ ಕಾಸರಗೋಡು ಆರ್.ಡಿ‌.ನಗರದ ಮೀಪುಗುರಿ ನಿವಾಸಿಯಾದ ವೈಶಾಲಿ ಪರಾರಿಯಾಗಿದ್ದು, ಜನವರಿ 31ರಂದು ಮಿದ್ಲಾಜ್ ಜತೆ ರಿಜಿಸ್ಟರ್​ ಮ್ಯಾರೇಜ್ ಆಗಿರುವ ಮಾಹಿತಿ ತಿಳಿದುಬಂದಿದೆ. ಆದ್ರೆ, ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಕಂಗಾಲಾಗಿರುವ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ವೈಶಾಲಿ ತಂದೆ ವಿದೇಶದಿಂದ ದೌಡಾಯಿಸಿದ್ದು, ಮಗಳಿಗಾಗಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ವೈಶಾಲಿ ತಾಯಿಯೂ ಸಹ ಕಣ್ಣೀರುತ್ತಲ್ಲೇ ತಮ್ಮ ದುಖವನ್ನು ತೋಡಿಕೊಂಡಿದ್ದಾರೆ.

ಮಂಗಳೂರು, (ಫೆಬ್ರವರಿ 11): ಅನ್ಯಕೋಮಿನ ಯುವಕನೊಂದಿಗೆ ಹಿಂದೂ (Hindu) ಯುವತಿ ಪರಾರಿಯಾಗಿರುವ ಘಟನೆ ಮಂಗಳೂರಿನ (Mangaluru) ಸುರತ್ಕಲ್​​ನಲ್ಲಿ ನಡೆದಿದೆ. ಸುರತ್ಕಲ್​ನ ಮುಕ್ಕ ಕಾಲೇಜಿನಲ್ಲಿ ಓದುತ್ತಿದ್ದ ಕಾಸರಗೋಡು ಆರ್.ಡಿ‌.ನಗರದ ಮೀಪುಗುರಿ ನಿವಾಸಿಯಾದ ವೈಶಾಲಿ ಪರಾರಿಯಾಗಿದ್ದು, ಜನವರಿ 31ರಂದು ಮಿದ್ಲಾಜ್ ಜತೆ ರಿಜಿಸ್ಟರ್​ ಮ್ಯಾರೇಜ್ ಆಗಿರುವ ಮಾಹಿತಿ ತಿಳಿದುಬಂದಿದೆ. ಆದ್ರೆ, ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಕಂಗಾಲಾಗಿರುವ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ವೈಶಾಲಿ ತಂದೆ ವಿದೇಶದಿಂದ ದೌಡಾಯಿಸಿದ್ದು, ಮಗಳಿಗಾಗಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ವೈಶಾಲಿ ತಾಯಿಯೂ ಸಹ ಕಣ್ಣೀರುತ್ತಲ್ಲೇ ತಮ್ಮ ದುಖವನ್ನು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 11, 2026 07:49 PM
Follow Us
Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More