ವಿರೋಧದ ನಡುವೆ ಮದ್ವೆ: ಮಾವನ ಜತೆ ಮಲಗುವಂತೆ ಸೊಸೆಗೆ ಅತ್ತೆ ಕಿರುಕುಳ

Updated on: Sep 14, 2025 | 9:24 PM

ವಿರೋಧದ ನಡುವೆಯೂ ಮದುವೆಯಾಗಿದ್ದಕ್ಕೆ ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಕಿರುಕುಳ (harassment allegation) ನೀಡಿದ ಆರೋಪವೊಂದು ಕೇಳಿ ಬಂದಿದೆ. ಸ್ವತಃ ಅತ್ತೆಯೇ ಸೊಗೆಗೆ ಮಾವನ ಜೊತೆಗೆ ಮಲಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಶಾಸೀಯಾ ಆರೋಪಿಸಿದ್ದಾಳೆ. ಯಾಸೀನ್‌ ಪಾಷಾ ಹಾಗೂ ಶಾಸೀಯಾ ಅವರ ಮದುವೆಯನ್ನು ಪೋಷಕರೇ ನಿಗದಿ ಮಾಡಿದ್ದರು. ಆದರೆ ನಂತರದಲ್ಲಿ ಈ ಮದುವೆಗೆ ಯಾಸೀನ್‌ ತಂದೆ-ತಾಯಿ ಹಿಂದೇಟು ಹಾಕಿದ್ದಾರೆ. ಆದರೂ ಇವರ ವಿರೋಧದ ನಡುವೆಯೂ ಯಾಸೀನ್‌ ಶಾಸೀಯಾಳನ್ನು ಮದುವೆಯಾಗಿದ್ದಾನೆ. ಇದೇ ಕಾರಣದಿಂದಾಗಿ ನಮ್ಮ ಮೇಲೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸೀಯಾ ಆರೋಪಿಸಿದ್ದು, ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು, (ಸೆಪ್ಟೆಂಬರ್‌ 14): ವಿರೋಧದ ನಡುವೆಯೂ ಮದುವೆಯಾಗಿದ್ದಕ್ಕೆ ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಕಿರುಕುಳ (harassment allegation) ನೀಡಿದ ಆರೋಪವೊಂದು ಕೇಳಿ ಬಂದಿದೆ. ಸ್ವತಃ ಅತ್ತೆಯೇ ಸೊಗೆಗೆ ಮಾವನ ಜೊತೆಗೆ ಮಲಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಶಾಸೀಯಾ ಆರೋಪಿಸಿದ್ದಾಳೆ. ಯಾಸೀನ್‌ ಪಾಷಾ ಹಾಗೂ ಶಾಸೀಯಾ ಅವರ ಮದುವೆಯನ್ನು ಪೋಷಕರೇ ನಿಗದಿ ಮಾಡಿದ್ದರು. ಆದರೆ ನಂತರದಲ್ಲಿ ಈ ಮದುವೆಗೆ ಯಾಸೀನ್‌ ತಂದೆ-ತಾಯಿ ಹಿಂದೇಟು ಹಾಕಿದ್ದಾರೆ. ಆದರೂ ಇವರ ವಿರೋಧದ ನಡುವೆಯೂ ಯಾಸೀನ್‌ ಶಾಸೀಯಾಳನ್ನು ಮದುವೆಯಾಗಿದ್ದಾನೆ. ಇದೇ ಕಾರಣದಿಂದಾಗಿ ನಮ್ಮ ಮೇಲೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸೀಯಾ ಆರೋಪಿಸಿದ್ದು, ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More