Gruha Lakshmi Scheme: ಗೃಹಲಕ್ಷ್ಮಿ ಯೋಜನೆಯಡಿ ಅತ್ತೆಯೇ ಫಲಾನುಭವಿ ಅನಿಸಿಕೊಳ್ಳುತ್ತಾಳೆ: ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್
ಒಂದು ಪಕ್ಷ ಅತ್ತೆ ಸ್ವಯಂಪ್ರೇರಿತಳಾಗಿ ಹಣ ಸೊಸೆಗೆ ನೀಡಿ ಅಂತ ಹೇಳಿದರೆ, ಆಕೆಯಿಂದ ಸಹಿ ಪಡೆದು ಸೊಸೆಗೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಗರದಲ್ಲಿಂದು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಮನೆಯೊಂದರಲ್ಲಿ ಅತ್ತೆ ಮತ್ತು ಸೊಸೆ ಜೊತೆಯಾಗಿ ಜೀವನ ನಡೆಸುತ್ತಿದ್ದರೆ, ಆ ಮನೆಯ ಯಜಮಾನಿ ಯಾರಾಗುತ್ತಾರೆ ಮತ್ತು ಗೃಹಲಕ್ಷ್ಮಿ ಯೋಜನೆಯಡಿ (Grihalakshmi scheme) ಯಾರಿಗೆ ರೂ. 2,000 ನೀಡಲಾಗುವುದು ಎಂದು ಕೇಳಿದ ಪ್ರಶ್ನೆಗೆ ಸಚಿವರಿಬ್ಬರೂ ಅತ್ತೆಯೇ ಮನೆ ಯಜಮಾನಿ ಅನಿಸಿಕೊಳ್ಳುತ್ತಾಳೆ ಮತ್ತು ಹಣ ಆಕೆಯ ಖಾತೆಗೆ ಜಮೆಯಾಗುತ್ತದೆ ಎಂದು ಹೇಳಿದರು. ಒಂದು ಪಕ್ಷ ಅತ್ತೆ ಸ್ವಯಂಪ್ರೇರಿತಳಾಗಿ ಹಣ ಸೊಸೆಗೆ ನೀಡಿ ಅಂತ ಹೇಳಿದರೆ, ಆಕೆಯಿಂದ ಸಹಿ ಪಡೆದು ಸೊಸೆಗೆ ನೀಡಲಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ಕ್ಯಾಬಿನೆಟ್ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ

ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
