ಓಕಳೀಪುರಂ ಕ್ಷೇತ್ರದ ಶಾಸಕನನ್ನು ಅಂಡರ್​ಪಾಸ್​ಗೆ ಕರೆತಂದು ಉಗಿಯಬೇಕೆಂದ ಅಟೋರಿಕ್ಷಾ ಚಾಲಕ

ಓಕಳೀಪುರಂ ಕ್ಷೇತ್ರದ ಶಾಸಕನನ್ನು ಅಂಡರ್​ಪಾಸ್​ಗೆ ಕರೆತಂದು ಉಗಿಯಬೇಕೆಂದ ಅಟೋರಿಕ್ಷಾ ಚಾಲಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 15, 2024 | 2:10 PM

ಕೇವಲ ಎಂಎಲ್​ಎ ಮಾತ್ರವಲ್ಲ, ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರವನ್ನೂ ಆಟೋರಿಕ್ಷಾ ಡ್ರೈವರ್ ತೆಗಳುತ್ತಾರೆ. ಅಧಿಕಾರಕ್ಕೆ ಬಂದ ಹೊಸತರಲ್ಲಿ ಬ್ರ್ಯಾಂಡ್ ಬೆಂಗಳೂರು ಎಂದು ಸೂಟುಬೂಟು ಧರಿಸಿ ಕುಣಿದಾಡಿದ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರೂ ಹೌದು. ಅವರೇ ಆಟೋರಿಕ್ಷಾ ಚಾಲಕನಿಗೆ ಉತ್ತರಿಸಬೇಕು.

ಬೆಂಗಳೂರು: ನಗರದಲ್ಲಿ ಮಳೆಯಾದರೆ ರಸ್ತೆಗಳು ನದಿಗಳಾಗುತ್ತವೆ ಮತ್ತು ಅಂಡರ್​ಪಾಸ್​ಗಳು ಸ್ವಿಮ್ಮಿಂಗ್ ಪೂಲ್​ಗಳಾಗಿ ಮಾರ್ಪಡುತ್ತವೆ. ಸರ್ಕಾರ ಯಾವುದೇ ಇರಲಿ ಜನರ ಬವಣೆ ತಪ್ಪಲ್ಲ. ಓಕಳೀಪುರಂ ಅಂಡರ್​ಪಾಸ್ ಜಲಾವೃತಗೊಂಡಿರರುವ ಸುದ್ದಿಯನ್ನು ಈಗಾಗಲೇ ನೀಡಿಯಾಗಿದೆ. ಅಲ್ಲಿಂದ ಹಾದು ಬರುತ್ತಿರುವ ಜನರ ಪ್ರತಿಕ್ರಿಯೆಗಳನ್ನು ಒಂದಷ್ಟು ಕೇಳಿ. ಈ ಕ್ಷೇತ್ರದ ಶಾಸಕನನ್ನು ಮನಸಾರೆ ಉಗಿಯಬೇಕೆಂದು ಒಬ್ಬ ಆಟೋರಿಕ್ಷಾ ಡ್ರೈವರ್ ಬಹಳ ಬೇಸರದಿಂದ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಂಗಳೂರು: ಕಂಟೋನ್ಮೆಂಟ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೂ ಕಂಟಕ, ರಸ್ತೆಗುಂಡಿ ಮುಚ್ಚುವ ಕೆಲಸದಲ್ಲಿ ಪಾಲಿಕೆ ಹಳೇ ರಾಗ