ಮೌಂಟ್ ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!

Updated on: Oct 11, 2026 | 10:35 AM

ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿ ಕನ್ನಡದ ಕೀರ್ತಿ ಪತಾಕೆ ಹಾರಿಸಿರುವ ಬೆಂಗಳೂರಿನ ಸಾಹಸಿಗಳಾದ ಸಂತೋಷ್ ದೇವರಾಜಪ್ಪ ಹಾಗೂ ನೇತ್ರ ತಜ್ಞೆ ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರ ರೋಚಕ ಸಂದರ್ಶನ. 46 ದಿನಗಳ ಕಠಿಣ ಪ್ರಯಾಣ, ಎದುರಾದ ಸವಾಲುಗಳು ಹಾಗೂ ಎವರೆಸ್ಟ್ ತುತ್ತತುದಿಯಲ್ಲಿ ಧ್ವಜ ಹಾರಿಸಿದ ಹೆಮ್ಮೆಯ ಕ್ಷಣಗಳ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಬೆಂಗಳೂರು, ಅಕ್ಟೋಬರ್ 11: ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಏರಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿರುವ ಬೆಂಗಳೂರಿನ ಸಾಹಸಿಗಳಾದ ಉದ್ಯಮಿ ಸಂತೋಷ್ ದೇವರಾಜಪ್ಪ ಮತ್ತು ನೇತ್ರ ತಜ್ಞೆ ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರ ರೋಚಕ ಸಾಹಸ ಯಾಗದ ವಿಶೇಷ ಸಂದರ್ಶನ ಇಲ್ಲಿದೆ. 46 ದಿನಗಳ ಕಠಿಣ ಹಾಗೂ ಸವಾಲಿನ ಸುದೀರ್ಘ ಪಯಣದ ಬಳಿಕ, ಈ ಇಬ್ಬರೂ ಸಾಧಕರು ಮೇ 21 ರಂದು ಎವರೆಸ್ಟ್ ತುತ್ತತುದಿಯನ್ನು ಯಶಸ್ವಿಯಾಗಿ ತಲುಪಿದರು. ಮೈನವಿರೇಳಿಸುವ ಈ ಸಾಹಸದ ಕುರಿತು ಟಿವಿ9 ಕನ್ನಡದೊಂದಿಗೆ ಮಾತನಾಡಿರುವ ಅವರು, ತಮ್ಮ ಜೀವಮಾನದ ಮರೆಯಲಾಗದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪ್ರತಿಕೂಲ ಹವಾಮಾನ, ಮೈಕೊರೆಯುವ ಚಳಿ, ಆಮ್ಲಜನಕದ ಕೊರತೆ ಮತ್ತು ಜೀವ ಭಯ ಹುಟ್ಟಿಸುವ ಹಿಮಪಾತದ ಅಡೆತಡೆಗಳನ್ನು ಮೆಟ್ಟಿನಿಂತು ಮುನ್ನಡೆದ ಹಾದಿಯನ್ನು ಅವರು ಮೆಲುಕುಹಾಕಿದ್ದಾರೆ. ಈ ಕಠಿಣ ಪಯಣಕ್ಕೆ ಕೈಗೊಳ್ಳಬೇಕಾದ ದೈಹಿಕ ಸಾಮರ್ಥ್ಯದ ತಾಲೀಮು ಹಾಗೂ ಮಾನಸಿಕ ದೃಢತೆಯ ಮಹತ್ವವನ್ನು ವಿವರಿಸಿದ್ದಾರೆ. ಅಂತಿಮವಾಗಿ ಎವರೆಸ್ಟ್ ತುದಿಯಲ್ಲಿ ರಾಷ್ಟ್ರಧ್ವಜದೊಂದಿಗೆ ಕನ್ನಡದ ಧ್ವಜವನ್ನು ಹಾರಿಸಿದ ಕ್ಷಣ ತಮ್ಮ ಜೀವಿತಾವಧಿಯ ಅತ್ಯಂತ ಹೆಮ್ಮೆಯ ಕ್ಷಣ ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More