ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಪಕ್ಷದ ಶಾಸಕರನ್ನೇ ತರಾಟೆಗೆ ತೆಗೆದುಕೊಂಡರು ಸಂಸದ ಪ್ರತಾಪ ಸಿಂಹ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 30, 2022 | 12:33 AM

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಗ್ಯಾಸ್ ಪೈಪ್ ಲೈನ್ ಜೋಡಣೆ ಕಾಮಗಾರಿಯ ವಿರುದ್ಧ ರಾಮದಾಸ್ ಅವರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಿರುವುದು ಪ್ರತಾಪ್ ಸಿಂಹ ಅವರಿಗೆ ಅಸಮಾಧಾನವನ್ನು ಉಂಟುಮಾಡಿದೆ. ಖಾಸಗಿ ಕಂಪನಿಗಳು ತಮ್ಮ ತಮ್ಮ ಕೇಬಲ್​ಗಳನ್ನು ಅಳವಡಿಡಸಲು ಮೈಸೂರಿನ ಉದ್ದಗಲಕ್ಕೂ ರಸ್ತೆಗಳನ್ನು ಅಗೆದಾಗ ಶಾಸಕರು ತೆಪ್ಪಗಿದ್ದಿದ್ದು ಯಾಕೆ?

ಕರ್ನಾಟಕದಲ್ಲಿ ಹೊಸ ಪರಿಪಾಠ ಶುರುವಾದಂತಿದೆ ಮಾರಾಯ್ರೇ. ಶಿಸ್ತಿನ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ ನಾಯಕರ ನಡುವಿನ ಆಂತರಿಕ ಕಲಹಲಗಳು (internal conflicts) ಸಾರ್ವಜನಿಕಗೊಳ್ಳುತ್ತಿವೆ. ಮೈಸೂರು ಭಾಗದಲ್ಲಿ ಇದು ಬೇರೆ ಕಡೆಗಳಿಗಿಂತ ಹೆಚ್ಚು ಕಂಡುಬರುತ್ತಿದೆ. ಮೈಸೂರಿನ ಜಲದರ್ಶಿನಿ ಗೆಸ್ಟ್ ಹೌಸ್ನಲ್ಲಿ ಶನಿವಾರದಂದು ಮಾಧ್ಯಮದವರೊಂದಿಗೆ ಮಾತಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ತಮ್ಮ ಪಕ್ಷದ ಚಾಮರಾಜನಗರ ಶಾಸಕ ಎಲ್ ನಾಗೇಂದ್ರ (L Nagendra) ಮತ್ತು ಮೈಸೂರಿನ ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ (SA Ramdas) ಅವರನ್ನು ತರಾಟೆಗೆ ತೆಗೆದುಕೊಂಡರು. ಅಸಲಿಗೆ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮಹತ್ವಾಕಾಂಕ್ಷೆಯ ಗ್ಯಾಸ್ ಪೈಪ್ ಲೈನ್ ಜೋಡಣೆ ಕಾಮಗಾರಿಯ ವಿರುದ್ಧ ರಾಮದಾಸ್ ಅವರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಿರುವುದು ಪ್ರತಾಪ್ ಸಿಂಹ ಅವರಿಗೆ ಅಸಮಾಧಾನವನ್ನು ಉಂಟುಮಾಡಿದೆ. ಖಾಸಗಿ ಕಂಪನಿಗಳು ತಮ್ಮ ತಮ್ಮ ಕೇಬಲ್​ಗಳನ್ನು ಅಳವಡಿಡಸಲು ಮೈಸೂರಿನ ಉದ್ದಗಲಕ್ಕೂ ರಸ್ತೆಗಳನ್ನು ಅಗೆದಾಗ ಶಾಸಕರು ತೆಪ್ಪಗಿದ್ದಿದ್ದು ಯಾಕೆ? ಅವರು ರಸ್ತೆಗಳನ್ನು ಅಗಿದ ಮೇಲೆ ಅದನ್ನು ಸರಿಮಾಡುವುದಿಲ್ಲ. ಆದರೆ ಜಲ ಜೀವನ್ ಮಿಶನ್ ಕಾಮಗಾರಿಗಾಗಿ ನೆಲವನ್ನು ಅಗೆದು ಪೈಪ್​ಗಳ ಜೋಡಣೆಯಾದ ಕೂಡಲೇ ರಸ್ತೆ ಸರಿಪಡಿಸಲಾಗುತ್ತದೆ.

ಖಾಸಗಿಯವರು ರಸ್ತೆ ತೋಡಿ ಹಾಳು ಮಾಡಿದಾಗ ಸುಮ್ಮನಿದ್ದ ರಾಮದಾಸ್ ಅವರು ಸರ್ಕಾರದ ಯೋಜನೆಯೊಂದರ ವಿರುದ್ಧ ಯಾಕೆ ಕೂಗಾಡುತ್ತಿದ್ದಾರೆ ಎಂದು ಸಿಂಹ ಪ್ರಶ್ನಿಸಿದರು.

ಖಾಸಗಿ ಕಂಪನಿಯವರು ಶಾಸಕರ ಜೊತೆ ವೈಯಕ್ತಿಕವಾಗಿ ಭೇಟಿ ಮಾಡಿ ಮಾತಾಡಿದ್ದಾರೆಯೇ? ಅವರು ಜಲ ಜೀವನ್ ಮಿಶನ್ ಯೋಜನೆಯನ್ನು ವಿರೋಧಿಸಿ ಪತ್ರ ಬರೆಯುವ ಬದಲು ನೇರವಾಗಿ ತಮ್ಮೊಂದಿಗೆ ಯಾಕೆ ಮಾತಾಡಲಿಲ್ಲ ಎಂದು ಸಿಂಹ ಕೇಳಿದರು.

ಚಾಮರಾಜನಗರದ ಶಾಸಕ ನಾಗೇಂದ್ರ ಅವರು ತಮ್ಮ ಕ್ಷೇತ್ರವನ್ನು ಬಹಳ ಅಭಿವೃದ್ಧಿ ಮಾಡಿದವರ ಹಾಗೆ ಮಾತಾಡುತ್ತಾರೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಲ್ಲೂ ಕಾಣಲಾರವು. ಅವರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು ತಾನು ಎಂದ ಸಿಂಹ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರವೇ ಆ ಕ್ಷೇತ್ರಕ್ಕೆ ರೂ. 50 ಕೋಟಿ ರಸ್ತೆ ಡಾಂಬರೀಕರಣಕ್ಕೆ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಮಾಧ್ಯಮದ ಮುಂದೆ ದಾಖಲೆಗಳಿಲ್ಲದೆ ಮಾತಾಡುವುದು ಶಾಸಕರುಗಳಿಗೆ ಶೋಭೆ ತರುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ:   Pratap Simha: ಗ್ಯಾಸ್ ಪೈಪ್​ಲೈನ್ ಸಂಪರ್ಕ ಏರ್ಪಟ್ಟರೆ ಜನರಿಗೆ ₹ 400 ಉಳಿತಾಯವಾಗಲಿದೆ: ಸಂಸದ ಪ್ರತಾಪ್ ಸಿಂಹ ಮಾಹಿತಿ