ಅನ್ಯಾಯದ ವಿರುದ್ಧ ಧ್ವನಿಯೆತ್ತದೆ ಶೋಭಾ ಕರಂದ್ಲಾಜೆ ರಾಜ್ಯದ ಜನತೆಗೆ ದ್ರೋಹವೆಸಗಿದ್ದಾರೆ: ಸಿದ್ದರಾಮಯ್ಯ
ತೆರಿಗೆ ಹಂಚಿಕೆಯನ್ನು ಫಲಾನುಭವಿಗಳಿಗೆ ಅರ್ಥವಾಗುವಂತೆ ವಿವರಿಸಿದ ಸಿದ್ದರಾಮಯ್ಯ ಕರ್ನಾಟಕದಿಂದ 100 ರೂ. ತೆರಿಗೆ ಹಣ ಕೇಂದ್ರಕ್ಕೆ ಹೋದರೆ ಅಲ್ಲಿಂದ ನಮಗೆ ವಾಪಸ್ಸು ಬರೋದು ಕೇವಲ 13 ರೂ. ಮಾತ್ರ, ಇದು ಅನ್ಯಾಯವಲ್ಲವೇ ಎಂದು ಕೇಳಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಇಲ್ಲ ಎಂದು ಆರ್ ಅಶೋಕ ಮತ್ತು ಬಿಎಸ್ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಉಡುಪಿ: ನಗರದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ (Guarantee Scheme Beneficiaries Convention) ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆಯವರನ್ನು (Shobha Karandlaje) ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕರ್ನಾಟಕದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ 4.30 ಲಕ್ಷ ಕೋಟಿ ರೂ. ಸಂದಾಯವಾಗುತ್ತಿದ್ದರೂ ಅಲ್ಲಿಂದ ರಾಜ್ಯಕ್ಕೆ ವಾಪಸ್ಸು ಬರುತ್ತಿರೋದು ಕೇವಲ ರೂ, 50,257 ಕೋಟಿ ಮಾತ್ರ. ಇಂಥ ಘೋರ ಅನ್ಯಾಯ ರಾಜ್ಯಕ್ಕೆ ಆಗುತ್ತಿದ್ದರೂ ಶೋಭಾ ಕರಂದ್ಲಾಜೆ ಒಮ್ಮೆಯೂ ಅನ್ಯಾಯದ ವಿರುದ್ಧ ತಮ್ಮ ಧ್ವನಿಯೆತ್ತಲಿಲ್ಲ, ಇಂಥ ಸಂಸದರು ನಿಮಗೆ ಬೇಕಾ? ಎಂದು ಸಿದ್ದರಾಮಯ್ಯ ಜನರನ್ನು ಕೇಳಿದರು. ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯದ 25 ಬಿಜೆಪಿ ಶಾಸಕರು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಅನ್ಯಾಯವೆಂದು ಹೇಳದೆ ನಾಡಿನ 7 ಕೋಟಿ ಕನ್ನಡಿಗರಿಗೆ ದ್ರೋಹವೆಸಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ತೆರಿಗೆ ಹಂಚಿಕೆಯನ್ನು ಫಲಾನುಭವಿಗಳಿಗೆ ಅರ್ಥವಾಗುವಂತೆ ವಿವರಿಸಿದ ಸಿದ್ದರಾಮಯ್ಯ ಕರ್ನಾಟಕದಿಂದ 100 ರೂ. ತೆರಿಗೆ ಹಣ ಕೇಂದ್ರಕ್ಕೆ ಹೋದರೆ ಅಲ್ಲಿಂದ ನಮಗೆ ವಾಪಸ್ಸು ಬರೋದು ಕೇವಲ 13 ರೂ. ಮಾತ್ರ, ಇದು ಅನ್ಯಾಯವಲ್ಲವೇ ಎಂದು ಕೇಳಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಇಲ್ಲ ಎಂದು ಆರ್ ಅಶೋಕ ಮತ್ತು ಬಿಎಸ್ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ, ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರುವಂತೆ ಅವರುಗೆ ಸವಾಲೆಸೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Go Back ಅನ್ನುವುದು ಶೋಭಾಯಮಾನವಲ್ಲ, ನಮಗೆ ಪ್ರಧಾನಿ ಮೋದಿ-ಕಮಲದ ಚಿಹ್ನೆಯಷ್ಟೇ ಕ್ಯಾಂಡಿಡೇಟ್ ಎಂದ ಶೋಭಾ ಕರಂದ್ಲಾಜೆ