ಮೈಸೂರು-ಬೆಂಗಳೂರು ಹೆದ್ದಾರಿ ಕಳಪೆ ಕಾಮಗಾರಿಯನ್ನು ಸಂಸದೆ ಸುಮಲತಾ ಅಂಬರೀಷ್ ತರಾಟೆಗೆ ತೆಗೆದುಕೊಂಡರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2022 | 2:57 PM

ಉದ್ಘಾಟನೆಯಾಗುವ ಮೊದಲೇ ರಸ್ತೆಯ ಸ್ಥಿತಿ ಹೀಗಾದರೆ ಮಳೆಗಾಲ ಮುಗಿಯುವಷ್ಟರಲ್ಲಿ ಇದರ ಗತಿ ಏನಾದೀತು ಅಂತ ಆತಂಕ ವ್ಯಕ್ತಪಡಿಸಿದರು. ರಸ್ತೆಗಳ ರಿಪೇರಿ ಮಾಡಿದ ನಂತರವೇ ಉದ್ಘಾಟನೆ ಮಾಡಬೇಕೆಂದು ಅವರು ತಾಕೀತು ಮಾಡಿದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Mysuru-Bengaluru) ಅವರು ಜಿಲ್ಲೆಯ ಮದ್ದೂರು ತಾಲ್ಲೂಕಿನ ನಿಡಗುಂದಿ ಬಳಿ ಮೈಸೂರು-ಬೆಂಗಳೂರು (Mysuru-Bengaluru) ಹೆದ್ದಾರಿಯ ವೀಕ್ಷಣೆ ಮಾಡಿ, ಕಳಪೆ ಕಾಮಗಾರಿಯನ್ನು ಉಲ್ಲೇಖಿಸಿ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರು. ಉದ್ಘಾಟನೆಯಾಗುವ ಮೊದಲೇ ರಸ್ತೆಯ ಸ್ಥಿತಿ ಹೀಗಾದರೆ ಮಳೆಗಾಲ ಮುಗಿಯುವಷ್ಟರಲ್ಲಿ ಇದರ ಗತಿ ಏನಾದೀತು ಅಂತ ಆತಂಕ ವ್ಯಕ್ತಪಡಿಸಿದರು. ರಸ್ತೆಗಳ ರಿಪೇರಿ ಮಾಡಿದ ನಂತರವೇ ಉದ್ಘಾಟನೆ ಮಾಡಬೇಕೆಂದು ಅವರು ತಾಕೀತು ಮಾಡಿದರು.