ಪಿಡಿಒಗೆ ಫೋನ್​​ ಕರೆಯಲ್ಲೇ ಕ್ಲಾಸ್​​ ತೆಗೆದುಕೊಂಡ ಸಂಸದ ಸುನೀಲ್ ಬೋಸ್: ಕಾರಣ ಇಲ್ಲಿದೆ

Edited By:

Updated on: May 20, 2026 | 11:46 AM

ಸಂಸದ ಸುನೀಲ್ ಬೋಸ್ ಅವರು ಪಿಡಿಒವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಕೆಡಿಪಿ ಸಭೆ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ ಪಿಡಿಒ ಮತ್ತು ಇತರ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಬೋಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಸಮಸ್ಯೆ ಕೇಳಲು ಅಧಿಕಾರಿಗಳು ಯಾರೂ ಇಲ್ಲ ಎಂದು ಕಿಡಿ ಕಾರಿದ ಅವರು, ಕರ್ತವ್ಯ ಲೋಪದ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಮೈಸೂರು, ಮೇ 20: ಸಾರ್ವಜನಿಕ ಸಭೆಯಲ್ಲಿ ಗೈರುಹಾಜರಿಯ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಒ) ಸಂಸದ ಸುನೀಲ್ ಬೋಸ್ ತರಾಟೆಗೆ ಪಡೆದ ಪ್ರಸಂಗ ನಡೆದಿದೆ. ಕೊತ್ತನಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಂಸದ ಸುನಿಲ್ ಬೋಸ್ ಅವರಿಗೆ ಸ್ಥಳೀಯರು ಸಮಸ್ಯೆಗಳ ಅರ್ಜಿ ನೀಡಿದ್ದರು.  ಸಂಸದರು ಬಂದರೂ ಪಿಡಿಒ ಗೈರಾಗಿದ್ದ ಕಾರಣ ಸಿಟ್ಟಾದ ಸುನೀಲ್ ಬೋಸ್, ನಂಜನಗೂಡು ದೇವರಾಯಶೆಟ್ಟಿ ಪುರ ಗ್ರಾಮ ಪಂಚಾಯ್ತಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒಗೆ ದೂರವಾಣಿ ಕರೆ ಮಾಡಿ ಗೈರಿನ ಬಗ್ಗೆ ವಿಚಾರಿಸಿದ್ದು, ಈ ವೇಳೆ ಕೆಡಿಪಿ ಸಭೆಯಲ್ಲಿ ಇರೋದಾಗಿ ಉತ್ತರ ಬಂದಿದೆ.  ಕೂಡಲೇ ಗರಂ ಆದ ಸಂಸದರು ನಾನು ಮಾಡದ ಕೆಡಿಪಿ ಸಭೆಯಾ? ಕೆಡಿಪಿ ಸಭೆಗೆ ಇಒಗಳು ಏಕೆ ಹೋಗಬೇಕು? ನಿನಗೇನು ಕೆಲಸ? ಯಾವ ಪಿಡಿಓ ಕೆಡಿಪಿ ಸಭೆಗೆ ಹೋಗಿದ್ದಾನೆ? ಕಥೆ ಹೇಳಬೇಡ, ನೀವೆಲ್ಲಾ ನಾಟಕ ಆಡ್ತಿದ್ದೀರ. ಯಾರಿಗಯ್ಯ ಹೂವು ಮುಡಿಸ್ತಿದ್ದೀಯ ಎಂದು ಕ್ಲಾಸ್​​ ತೆಗೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us