ಮೃಣಾಲ್ ದೇಹದಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ ಅಲ್ಲ, ಅವರ ತಂದೆ ಬಣಜಿಗ!: ಮುರುಗೇಶ್ ನಿರಾಣಿ, ಮಾಜಿ ಸಚಿವ

|

Updated on: Apr 11, 2024 | 5:47 PM

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ನಿಸ್ಸಂದೇಹವಾಗಿ ವೀರಶೈವ ಪಂಚಮಸಾಲಿ ಸಮಾಜದವರೇ, ಆದರೆ ಲಕ್ಷ್ಮಿ ಅವರ ಪತಿ ರವೀಂದ್ರ ಹೆಬ್ಬಾಳ್ಕರ್ ವೀರಶೈವ ಲಿಂಗಾಯುತ ಬಣಜಿಗ ಸಮಾಜದವರು. ಮಗನಿಗೆ ಅಪ್ಪನ ಹೆಸರು, ಮನೆತನದ ಹೆಸರು ಮತ್ತು ಜಾತಿ ಅನ್ವಯಿಸುತ್ತವೆ ಎಂದು ನಿರಾಣಿ ಹೇಳಿದರು.

ಬಾಗಲಕೋಟೆ: ಈ ಮಠಾಧೀಶರು, ಸ್ವಾಮಿಗಳು ಯಾಕಾದರೂ ರಾಜಕೀಯ ರಂಗದಲ್ಲಿ ಮೂಗು ತೂರಿಸುವ ಪ್ರಯತ್ನ ಮಾಡುತ್ತಾರೋ? ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ನೇತೃತ್ವವಹಿಸಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು (Basava Jaya Mrithyunjaya Swamiji) ಲಕ್ಷ್ಮಿ ಹೆಬ್ಕಾಳ್ಕರ್ (Lakshmi Hebbalkar) ಮಗ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರಕ್ಕಿಳಿದು ಟೀಕೆಗೆ ಗುರಿಯಾಗಿದ್ದಾರೆ. ಬಾಗಲಕೋಟೆಯಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಸ್ವಾಮೀಜಿ ವಿರುದ್ಧ ತೀವ್ರ ಸ್ವರೂಪ ವಾಕ್ಪ್ರಹಾರ ನಡೆಸಿದ್ದಲ್ಲದೆ ಮೃಣಾಲ್ ನ ಉಪಜಾತಿಯ ಬಗ್ಗೆಯೂ ಪ್ರಶ್ನೆ ಎತ್ತಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ನಿಸ್ಸಂದೇಹವಾಗಿ ವೀರಶೈವ ಪಂಚಮಸಾಲಿ ಸಮಾಜದವರೇ, ಆದರೆ ಲಕ್ಷ್ಮಿ ಅವರ ಪತಿ ರವೀಂದ್ರ ಹೆಬ್ಬಾಳ್ಕರ್ ವೀರಶೈವ ಲಿಂಗಾಯುತ ಬಣಜಿಗ ಸಮಾಜದವರು. ಮಗನಿಗೆ ಅಪ್ಪನ ಹೆಸರು, ಮನೆತನದ ಹೆಸರು ಮತ್ತು ಜಾತಿ ಅನ್ವಯಿಸುತ್ತವೆ ಎಂದು ನಿರಾಣಿ ಹೇಳಿದರು.

ಹಾಗಿದ್ದಲ್ಲಿ ಮೃಣಾಲ್ ಪಂಚಮಸಾಲಿ ಸಮಾಜಕ್ಕೆ ಸೇರಿದವ ಹೇಗಾಗುತ್ತಾನೆ? ಅವನು ಬಣಜಿಗ ಸಮಾಜಕ್ಕೆ ಸೇರುತ್ತಾನೆ ಎಂದು ನಿರಾಣಿ ಹೇಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಗಿಳಿದಿರುವ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತ್ತು ಮೃಣಾಲ್ ಇಬ್ಬರೂ ಬಣಜಿಗ ಸಮಾಜಕ್ಕೆ ಸೇರಿದವರಾಗಿರುವುದರಿಂದ ಸ್ವಾಮೀಜಿಯವರು ಮೃಣಾಲ್ ಪರ ಯಾಕೆ ಮಾತಾಡುತ್ತಿದ್ದರೆ? ಮೃಣಾಲ್ ದೇಹದಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತವೇ? ಅಂತ ಸ್ವಾಮಿಜಿಯವರೇ ಹೇಳಬೇಕು, ಎಂದು ಮುರುಗೇಶ್ ನಿರಾಣಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಳಗಾವಿಯಲ್ಲಿ ಜೋರಾಯ್ತು ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ: ರಾಜ್ಯ ನಾಯಕರು, ಹೈಕಮಾಂಡ್ ಭೇಟಿಗೆ ಮುಂದಾದ ಸ್ಥಳೀಯರು