ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಹೆಡ್ ಕೋಚ್ ಬಿಸಿ ರಮೇಶ್​ಗೆ ಎಮ್ಮೆಸ್ ಧೋನಿ ನೆಚ್ಚಿನ ಕ್ರಿಕೆಟರ್!

Updated on: Feb 05, 2025 | 8:09 PM

ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತೇನೆ ಎನ್ನುವ ರಮೇಶ್ ಚಿಕ್ಕಂದಿನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಹೂಲಿಯನ್ನು ಇಷ್ಟಪಟ್ಟರೂ ಅವರ ಫೇವರಿಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ. ಅವರ ನಾಯಕತ್ವದ ಗುಣಗಳು ತುಂಬಾ ಇಷ್ಟವಾಗುತ್ತವೆ ಎಂದು ಹೇಳುವ ರಮೇಶ್ ಯಾವ ಆಟಗಾರನಿಗೆ ಯಾವ ಜವಾಬ್ದಾರಿ ವಹಿಸಬೇಕು ಅನ್ನೋದು ಧೋನಿಗೆ ಚೆನ್ನಾಗಿ ಗೊತ್ತಿತ್ತು ಅನ್ನುತ್ತಾರೆ.

ಬೆಂಗಳೂರು: ಕ್ರಿಕೆಟ್ ಮತ್ತು ಕಬಡ್ಡಿ ನಡುವೆ ಎತ್ತಣ ಸಂಬಂಧವಯ್ಯ? ಪ್ರೋ ಕಬಡ್ಡಿ ಲೀಗ್ ನಲ್ಲಿ ಆಡುವ ಬೆಂಗಳೂರು ಬುಲ್ಸ್ ಟೀಮಿನ ಹೆಡ್ ಕೋಚ್ ಬಿಸಿ ರಮೇಶ್ ಕನ್ನಡಿಗರಿಗೆ ಚಿರಪರಿಚಿತರು. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರಾಗಿದ್ದ ರಮೇಶ್ ಅರ್ಜುನ ಪ್ರಶಸ್ತಿ ವಿಜೇತರು ಕೂಡ ಹೌದು. ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಅವರು ಕ್ರಿಕೆಟ್ ಬಗ್ಗೆಯೂ ಮಾತಾಡಿದ್ದು ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡ ಈ ಬಾರಿ ಇಂಡಿಯನ್ ಪ್ರಿಮೀಯರ್ ಲೀಗ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನ ಫುಟ್ಬಾಲ್ ತಂಡ 2018-19 ಸಾಲಿನ ಐಎಸ್​ಎಲ್ ಗೆದ್ದಿದೆ ಮತ್ತು 2014ರಲ್ಲಿ ಬೆಂಗಳೂರು ಬುಲ್ಸ್ ಪ್ರೋ ಕಬಡ್ಡಿ ಲೀಗ್ ಗೆದ್ದಿದೆ, ಆದರೆ ಆರ್​ಸಿಬಿ ಇನ್ನೂ ಒಮ್ಮೆಯೂ ಐಪಿಎಲ್ ಗೆದ್ದಿಲ್ಲ, ಹಾಗಾಗಿ ಈ ಸಲ ಗೆಲ್ಲಲೇಬೇಕು ಎಂದು ರಮೇಶ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: PKL Auction 2024: ಪ್ರೋ ಕಬಡ್ಡಿ ಲೀಗ್ ಹರಾಜಿನಲ್ಲಿ ಕೋಟಿಗೂ ಅಧಿಕ ಬೆಲೆ ಪಡೆದವರ ಪಟ್ಟಿ