ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2024 | 3:57 PM

ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ವಿಚಾರವಾಗಿ ಇಂದು ಮೈಸೂರು ಲೋಕಾಯುಕ್ತ ಕಚೇರಿ ಭೇಟಿ ನೀಡಿದ ದೂರುದಾರ ಸ್ನೇಹಮಯಿ ಕೃಷ್ಣ ದಾಖಲೆಗಳನ್ನು ಕೊಟ್ಟಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಕಾಂಗ್ರೆಸ್​ ವಕ್ತಾರ ಎಂ.ಲಕ್ಷ್ಮಣ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರು, ಅಕ್ಟೋಬರ್​ 14: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ತನಿಖೆ ನಡೆಸುವಂತೆ ದಾಖಲೆಗಳನ್ನು ಕೊಟ್ಟಿದ್ದೇನೆ. ಲೋಕಾಯುಕ್ತ ಅಧಿಕಾರಿಗಳಿಗೆ 25 ಪುಟಗಳ ಮಾಹಿತಿ ಕೊಟ್ಟಿದ್ದೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದೇ ಪದೆ ಎಂ.ಲಕ್ಷ್ಮಣ ಲೋಕಾಯುಕ್ತ ಕಚೇರಿಗೆ ಬರುತ್ತಾರೆ. ಆ ಮೂಲಕ ಪ್ರಭಾವ ಬಿರುತ್ತಿದ್ದಾರೆ ಅಂತಾ ಅನ್ನಿಸುತ್ತೆ. ಹೀಗಾಗಿ ಲೋಕಾಯುಕ್ತಕ್ಕೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಎಂದಿದ್ದೇನೆ. ಹೈಕೋರ್ಟ್​​ನಲ್ಲಿ ಸಿಎಂ ಕೆಲ ಮಾಹಿತಿ ಕೊಡದೆ ಮುಚ್ಚಿಟ್ಟಿದ್ದಾರೆ. ಆ ಎಲ್ಲಾ ಅಂಶಗಳನ್ನು ನಾನು ಹೇಳಿದ್ದೇನೆ. ವೈಟ್ನರ್ ಹಾಕಿರುವ ಮಾಹಿತಿಯನ್ನು ಕೋರ್ಟ್​ಗೆ ಕೊಟ್ಟಿಲ್ಲ. ಸಿಎಂ ಕೂಡ ಹೋದ ಕಡೆ ಪ್ರಚೋದನೆ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ನನಗೆ ನನ್ನ ಕುಟುಂಬಕ್ಕೆ ಭಯವಿದೆ. ಈ ಬಗ್ಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on