ಸಿಎಂ ಪತ್ನಿಯವರ ಜಮೀನು ಮುಡಾ ಸ್ವಾಧೀನ ಮಾಡಿಕೊಂಡಿದ್ದು ಬಿಜೆಪಿ ಅಧಿಕಾರದಲ್ಲಿದ್ದಾಗ: ಡಿಕೆ ಶಿವಕುಮಾರ

ಸಿಎಂ ಪತ್ನಿಯವರ ಜಮೀನು ಮುಡಾ ಸ್ವಾಧೀನ ಮಾಡಿಕೊಂಡಿದ್ದು ಬಿಜೆಪಿ ಅಧಿಕಾರದಲ್ಲಿದ್ದಾಗ: ಡಿಕೆ ಶಿವಕುಮಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 02, 2024 | 5:01 PM

ರಾಮನಗರ ಜಿಲ್ಲೆಯ ಸುಮಾರು 70ಮಹಿಳೆಯೊಬ್ಬರು ನಾಡಕಚೇರಿಯಲ್ಲಿ ಖಾತಾ ಮಾಡಿಕೊಡಲು ₹ 50,000 ಲಂಚ ಕೇಳಿರುವುದನ್ನು ಉಲ್ಲೇಖಿಸಿದ ಡಿಕೆ ಶಿವಕುಮಾರ್, ಆ ಮಹಿಳೆಯ ಅರ್ಜಿಯನ್ನು ಜಿಲ್ಲಾಧಿಕಾರಿಯವರಿಗೆ ಕೊಟ್ಟಿದ್ದು ಅವರು ಪರಿಶೀಲನೆ ನಡೆಸಿ ಲಂಚ ಕೇಳಿದ್ದು ನಿಜವಾದರೆ ಸಾಯಂಕಾಲದೊಳಗೆ ಲಂಚ ಕೇಳಿದ ನೌಕರನನ್ನು ಸಸ್ಪೆಂಡ್ ಮಾಡಲಿದ್ದಾರೆ ಎಂದರು.

ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಆರೋಪ ಬಂದಾಗ ಜೊತೆಯಾಗಿ ನಿಲ್ಲುತ್ತಾರೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ₹4,000 ಕೋಟಿಗೂ ಹೆಚ್ಚಿನ ಅವ್ಯವಹಾರ ಮತ್ತು ಸಿದ್ದರಾಮಯ್ಯ ಅವರ ಪತ್ನಿಗೆ ಅಕ್ರಮವಾಗಿ ಸೈಟು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಸಿಎಂ ಅವರ ಪತ್ನಿ ಯಾಕೆ ಅಕ್ರಮವೆಸಗುತ್ತಾರೆ? ಅವರ ಹೆಸರಲ್ಲಿದ್ದ ಜಮೀನನ್ನು ಮುಡಾ ಸ್ವಾಧೀನ ಮಾಡಿಕೊಂಡು ನಿಯಮಾವಳಿ ಪ್ರಕಾರ 50:50 ಅನುಪಾತದಲ್ಲಿ ಅವರಿಗೆ ಸೈಟುಗಳನ್ನು ನೀಡಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಈ ಕಾನೂನು ಜಾರಿಗೆ ಬಂದಿದ್ದು ಮತ್ತು ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಈ ನಿಯಮ ಚಾಲ್ತಿಯಲ್ಲಿದೆ. ಕೆಲವು ಪ್ರಾಧಿಕಾರಗಳಲ್ಲಿ 50:50 ಇದ್ದರೆ ಬೇರೆ ಕೆಲವು ಕಡೆ 60:40 ಅನುಪಾತದಲ್ಲಿ ಸೈಟುಗಳ ಹಂಚಿಕೆಯಾಗುತ್ತಿದೆ. ಸಿಎಂ ಪತ್ನಿಯವರ ಜಮೀನನ್ನು ಹಿಂದಿನ ಸರ್ಕಾರದ ಆಡಳಿತದಲ್ಲಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು ಮತ್ತು ಅವರಿಗೆ ಒಂದೇ ಕಡೆ ಸೈಟುಗಳನ್ನು ನೀಡದೆ ಬೇರೆ ಬೇರೆ ಸ್ಥಳಗಳಲ್ಲಿ ನೀಡಲಾಗಿದೆ, ಇದರಲ್ಲಿ ಅಕ್ರಮ ಎಲ್ಲಿಂದ ಬಂತು ಎಂದು ಶಿವಕುಮಾರ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ