BJP JDS Padayatra Live: ಬಿಜೆಪಿ-ಜೆಡಿಎಸ್​ 5ನೇ ದಿನದ ಪಾದಯಾತ್ರೆಗೆ ಭರ್ಜರಿ ರೆಸ್ಪಾನ್ಸ್​​

BJP JDS Padayatra Live: ಬಿಜೆಪಿ-ಜೆಡಿಎಸ್​ 5ನೇ ದಿನದ ಪಾದಯಾತ್ರೆಗೆ ಭರ್ಜರಿ ರೆಸ್ಪಾನ್ಸ್​​

ವಿವೇಕ ಬಿರಾದಾರ
|

Updated on:Aug 07, 2024 | 11:45 AM

MUDA Scam, Bangalore Mysore Padayatra Live: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಆಗ್ರಹಿಸಿ ಬಿಜೆಪಿ-ಜೆಡಿಎಸ್​ ನಾಯಕರ ಮೈಸೂರು ಚಲೋ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಪಾದಯಾತ್ರೆ ಮಂಡ್ಯದಿಂದ ಆರಂಭವಾಗಿದೆ. ಲೈವ್​ ಇಲ್ಲಿ ವೀಕ್ಷಿಸಿ

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಜಂಟಿಯಾಗಿ ಆರಂಭಿಸಿದ ಮೈಸೂರು ಚಲೋ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದೆ. ಐದನೇ ದಿನದ ಪಾದಯಾತ್ರೆ ಮಂಡ್ಯದಿಂದ ಆರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚರಕ ತಿರುಗಿಸಿ, ಬಾರುಕೋಲು ಬೀಸುವ ಮೂಲಕ ಐದನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದರು. ಮಂಡ್ಯದ ಶ್ರೀನಿವಾಸಪುರ ಗೇಟ್​ನಿಂದ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಸುಮಾರು 16 ಕಿಮೀ ಪಾದಯಾತ್ರೆ ನಡೆಯಲಿದೆ.

Published on: Aug 07, 2024 11:11 AM