Loading video

ಮುಡಾ ಹಗರಣ: ಹಲವು ದಾಖಲೆಗಳನ್ನು ನೀಡಿದ್ದೇ ಕಾಂಗ್ರೆಸ್ ಪಕ್ಷದವರು! ಸ್ನೇಹಮಯಿ ಕೃಷ್ಣ ಶಾಕಿಂಗ್ ಹೇಳಿಕೆ

| Updated By: Ganapathi Sharma

Updated on: Mar 05, 2025 | 8:46 AM

ಮುಡಾ ಹಗರಣದ ವಿರುದ್ಧದ ಹೋರಾಟಗಾರ ಸ್ನೇಹಮಯಿ ಕೃಷ್ಣ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕೇವಲ ಸಿದ್ದರಾಮಯ್ಯ ವಿರುದ್ಧವಷ್ಟೇ ತಮ್ಮ ಹೋರಾಟ ಅಲ್ಲ ಎಂದಿರುವ ಅವರು, ಮುಡಾ ಹಗರಣ ಸಂಬಂಧ ಕಾಂಗ್ರೆಸ್ ಮುಖಂಡರೂ ಕೆಲವರು ಅನೇಕ ದಾಖಲೆಗಳನ್ನು ಒದಗಿಸಿದ್ದಾರೆ ಎಂದಿದ್ದಾರೆ. ಸ್ನೇಹಮಯಿ ಕೃಷ್ಣ ಮಾತುಗಳ ವಿಡಿಯೋ ಇಲ್ಲಿದೆ ನೋಡಿ.

ಮೈಸೂರು, ಮಾರ್ಚ್​ 5: ‘ಮುಡಾ ಹಗರಣ ಸಂಬಂಧ ಕೇವಲ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವಷ್ಟೇ ನನ್ನ ಹೋರಾಟ ಅಲ್ಲ. ಒಟ್ಟಾರೆಯಾಗಿ ಅಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ತನಿಯಾಗಬೇಕು. ಯಾರೆಲ್ಲ 50:50 ಅನುಪಾತದಲ್ಲಿ ನಿವೇಶನ ಪಡೆಯುವಲ್ಲಿ ಅಕ್ರಮದಲ್ಲಿ ಶಾಮೀಲಾಗಿದ್ದಾರೋ ಅವರೆಲ್ಲರ ವಿರುದ್ಧ ತನಿಖೆ ನಡೆದು ಕ್ರಮವಾಗಬೇಕು ಎಂಬುದೇ ನನ್ನ ಆಶಯ’ ಎಂದು ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅಲ್ಲದೆ, ಮುಡಾ ಹಗರಣ ಸಂಬಂಧ ದಾಖಲೆಗಳನ್ನು ಒದಗಿಸಿದವರಲ್ಲಿ ಕಾಂಗ್ರೆಸ್​​ನವರು ಕೂಡ ಇದ್ದಾರೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ನೇರವಾಗಿ ಎದುರು ಬಂದು ಹೋರಾಟ ಮಾಡಲಾಗದೆ ಅನೇಕರು ನನ್ನ ಮೂಲಕ ಹೋರಾಟ ಮಾಡುತ್ತಿದ್ದಾರೆ. ಹಲವಾರು ದಾಖಲೆಗಳನ್ನು ಕಾಂಗ್ರೆಸ್ ಮುಖಂಡರೇ ತಂದುಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ