Mughal Gardens: ಜನಪ್ರಿಯ ಮೊಘಲ್ ಗಾರ್ಡನ್ಸ್ ಸಾರ್ವಜನಿಕ ವೀಕ್ಷಣೆಗೆ ಎಂದಿನಿಂದ ಲಭ್ಯ? ಇಲ್ಲಿದೆ ಮಾಹಿತಿ

| Updated By: shivaprasad.hs

Updated on: Feb 11, 2022 | 8:53 AM

ಜನಪ್ರಿಯ ಮೊಘಲ್ ಗಾರ್ಡನ್ಸ್ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ. ಇದಕ್ಕೆ ಪ್ರವೇಶ ಪಡೆಯುವುದು ಹೇಗೆ? ಎಂದಿನಿಂದ ಎಂದಿನವರೆಗೆ ಮೊಘಲ್ ಗಾರ್ಡನ್ ವೀಕ್ಷಿಸಬಹುದು? ಈ ಕುರಿತ ಮಾಹಿತಿ ಇಲ್ಲಿದೆ.

ನವದೆಹಲಿ: ಮೊಘಲ್ ಗಾರ್ಡನ್ಸ್ (Mughal Gardens) ಫೆಬ್ರವರಿ 12ರ ಶನಿವಾರದಿಂದ ಮಾರ್ಚ್ 16 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ರಾಷ್ಟ್ರಪತಿ ಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮುಂಗಡ ಆನ್‌ಲೈನ್ ಬುಕಿಂಗ್ ಮೂಲಕ ಮಾತ್ರ ಪ್ರವಾಸಿಗರಿಗೆ ಉದ್ಯಾನವನವನ್ನು ನೋಡಲು ಅವಕಾಶ ನೀಡಲಾಗುತ್ತದೆ ಎಂದು ಅದು ಹೇಳಿದೆ. https://rashtrapatisachivalaya.gov.in ಮೂಲಕ ಗಾರ್ಡನ್ ವೀಕ್ಷಣೆಗೆ ಬುಕ್ಕಿಂಗ್ ಮಾಡಬಹುದು. ಹಿಂದಿನ ವರ್ಷದಂತೆ ಈ ವರ್ಷವೂ ಮುನ್ನೆಚ್ಚರಿಕೆ ಕ್ರಮವಾಗಿ ನೇರವಾಗಿ ವಾಕ್-ಇನ್ ಪ್ರವೇಶ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಈ ವರ್ಷದ ‘ಉದ್ಯಾನೋತ್ಸವ’ದ ಪ್ರಮುಖ ಆಕರ್ಷಣೆಯೆಂದರೆ 11 ವಿಧದ ಟುಲಿಪ್‌ಗಳು ಫೆಬ್ರವರಿಯಲ್ಲಿ ಹಂತ ಹಂತವಾಗಿ ಅರಳುವ ನಿರೀಕ್ಷೆಯಿದೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಗುರುವಾರ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ವಾರ್ಷಿಕ ‘ಉದ್ಯಾನೋತ್ಸವ’ವನ್ನು ಉದ್ಘಾಟಿಸಿದರು. ಮೊಘಲ್ ಗಾರ್ಡನ್ಸ್ ಫೆಬ್ರವರಿ 12, 2022 ರಿಂದ ಮಾರ್ಚ್ 16, 2022 ರವರೆಗೆ (ನಿರ್ವಹಣಾ ದಿನಗಳಾದ ಸೋಮವಾರದಂದು ಹೊರತುಪಡಿಸಿ) ಪ್ರತಿದಿನ 10:00 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭೇಟಿಯ ಸಂದರ್ಭದಲ್ಲಿ ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ.

ಇದನ್ನೂ ಓದಿ:

ಮನೆ ಬಿಟ್ಟಿದ್ದ ಯುವತಿಗೆ ಕೆಲಸ ಕೊಡುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ಮಾರಾಟ ಮಾಡಲು ದೆಹಲಿಗೆ ಹೋಗುತ್ತಿದ್ದ ಆರೋಪಿ ಅರೆಸ್ಟ್, ಯುವತಿ ರಕ್ಷಣೆ

Kangana Ranaut: ‘ನಿಮ್ಮನ್ನು ಬಂಧಿಸಿಕೊಳ್ಳಬೇಡಿ, ಸ್ವತಂತ್ರರಾಗುವತ್ತ ಯೋಚಿಸಿ’; ಹಿಜಾಬ್ ಪ್ರಕರಣದ ಕುರಿತು ಕಂಗನಾ ಪ್ರತಿಕ್ರಿಯೆ

Published on: Feb 11, 2022 08:47 AM