‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು

Updated on: Sep 22, 2026 | 7:40 PM

ಜನಪ್ರಿಯ ‘ಮುಖ್ಯಮಂತ್ರಿ’ ನಾಟಕ 900ನೇ ಪ್ರದರ್ಶನ ಕಾಣುತ್ತಿದೆ. ಈ ಕುರಿತು ನಟ ಮುಖ್ಯಮಂತ್ರಿ ಚಂದ್ರು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈವರೆಗಿನ ಜರ್ನಿಯನ್ನು ಚಂದ್ರು ಅವರು ಮೆಲುಕು ಹಾಕಿದ್ದಾರೆ. 900ನೇ ಪ್ರದರ್ಶನದಲ್ಲಿ ಹಲವು ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ ಎಂಬುದನ್ನು ಅವರು ತಿಳಿದಿದ್ದಾರೆ.

ಜನಪ್ರಿಯ ‘ಮುಖ್ಯಮಂತ್ರಿ’ ನಾಟಕ 900ನೇ ಪ್ರದರ್ಶನ ಕಾಣುತ್ತಿದೆ. ಈ ಕುರಿತು ನಟ ಮುಖ್ಯಮಂತ್ರಿ ಚಂದ್ರು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಒಬ್ಬನೇ ವ್ಯಕ್ತಿ ನಿರಂತರವಾಗಿ 900 ಶೋ ಮಾಡಿದ ಉದಾಹರಣೆ ಬೇರೆ ಎಲ್ಲೂ ಇಲ್ಲ. 900 ಪ್ರದರ್ಶನಗಳಲ್ಲೂ ನಾನೇ ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ. ಇದು ಮುಂದಿನ ತಲೆಮಾರಿನ ಜನರಿಗೆ ತಿಳಿಯಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ನಾನು ತೊಡಗಿಕೊಂಡಿದ್ದರೂ ಕೂಡ ಈ ನಾಟಕವನ್ನು ನಾನು ಬಿಟ್ಟಿಲ್ಲ. ಪ್ರತಿ ತಿಂಗಳು ಒಂದು ಶೋ ಮಾಡಿದ್ದೇನೆ. ಅಂತರ ಕೊಡದೇ ಎಲ್ಲ ವರ್ಷ ಕೂಡ ಮಾಡಿದ್ದೇನೆ. ಇದು ಒಂದು ರೀತಿಯ ನನ್ನ ವಿಶೇಷವಾದ ವ್ಯಕ್ತಿತ್ವ. 900ನೇ ಪ್ರದರ್ಶನವನ್ನು ವಿಶೇಷವಾಗಿ ಮಾಡಬೇಕು ಅಂತ ಅನಿಸಿದೆ. ಇದನ್ನು ಉಚಿತವಾಗಿ ಮಾಡುತ್ತೇವೆ. ವೀಕ್ಷಕರು ಮುಂಚಿತವಾಗಿ ಪಾಸ್ ಪಡೆಯಬೇಕು’ ಎಂದು ಚಂದ್ರು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More