ಮುಂಬೈನ ಅದ್ದೂರಿ ಗಣೇಶ ವಿಸರ್ಜನೆ ವೇಳೆ ಜನಸಾಗರ
ಮುಂಬೈನಲ್ಲಿ ಗಣೇಶನಿಗೆ ಭವ್ಯ ವಿದಾಯ ಹೇಳಲಾಗಿದೆ. ಗಣೇಶ ಚತುರ್ಥಿ ಆಚರಣೆಗಳು ಆಗಸ್ಟ್ 27ರಂದು ಪ್ರಾರಂಭವಾಗಿ 10 ದಿನಗಳ ಕಾಲ ನಡೆಯಿತು. ಗಣೇಶೋತ್ಸವ ಆಚರಣೆಯ ಅಂತಿಮ ದಿನವಾದ ಇಂದು ಗಣೇಶ ವಿಸರ್ಜನೆಯನ್ನು ಮಾಡಲಾಯಿತು. ಈ ವೇಳೆ ಸಾವಿರಾರು ಜನರು ಸೇರಿದ್ದರು. ಅನಂತ ಚತುರ್ದಶಿಯಾದ ಇಂದು ಗಣೇಶನನ್ನು ವಿಸರ್ಜಿಸಲಾಯಿತು. ಗಣೇಶನ ವಿಸರ್ಜನೆ ವೇಳೆ ಭಕ್ತರು ಪಟಾಕಿಗಳನ್ನು ಸಿಡಿಸುತ್ತಾ, ಡ್ಯಾನ್ಸ್ ಮಾಡುತ್ತಾ, ಬಣ್ಣಗಳನ್ನು ಆಕಾಶಕ್ಕೆ ಎರಚುತ್ತಾ ಸಂಭ್ರಮದಿಂದ ಗಣಪತಿಯನ್ನು ಬೀಳ್ಕೊಟ್ಟರು.
ಮುಂಬೈ, ಸೆಪ್ಟೆಂಬರ್ 6: ಮುಂಬೈನ ಪ್ರಸಿದ್ಧ ಲಾಲ್‌ಬೌಚ ರಾಜ ಮತ್ತು ಗಣೇಶ ಗಲಿ ಕಾ ರಾಜಾ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮುಂಬೈನ ಗಣೇಶೋತ್ಸವ ಬಹಳ ವಿಶೇಷವಾದುದು. ಇಲ್ಲಿ ಭವ್ಯ ಮೆರವಣಿಗೆಯ ಮೂಲಕ ಬೃಹತ್ ಗಣೇಶನ ಮೂರ್ತಿಯನ್ನು ವಿಸರ್ಜನೆಗೆ ತರಲಾಯಿತು. ಅನಂತ ಚತುರ್ದಶಿಯಾದ ಇಂದು ಗಣೇಶನನ್ನು ವಿಸರ್ಜಿಸಲಾಯಿತು. ಗಣೇಶನ ವಿಸರ್ಜನೆ ವೇಳೆ ಭಕ್ತರು ಪಟಾಕಿಗಳನ್ನು ಸಿಡಿಸುತ್ತಾ, ಡ್ಯಾನ್ಸ್ ಮಾಡುತ್ತಾ, ಬಣ್ಣಗಳನ್ನು ಆಕಾಶಕ್ಕೆ ಎರಚುತ್ತಾ ಸಂಭ್ರಮದಿಂದ ಗಣಪತಿಯನ್ನು ಬೀಳ್ಕೊಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 06, 2025 10:08 PM

