‘ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಹಿ ಸುದ್ದಿ ಕೊಡ್ತಾರೆ’: ಚಿತ್ರೋತ್ಸವದಲ್ಲಿ ಮುನಿರತ್ನ ಹೇಳಿಕೆ
ಈ ಬಾರಿಯ ಬಜೆಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಸರ್ಪ್ರೈಸ್ ಇರಲಿದೆ ಎಂದು ಮುನಿರತ್ನ ಹೇಳಿದ್ದಾರೆ. ಈ ಮಾತಿನಿಂದಾಗಿ ಚಿತ್ರೋದ್ಯಮದವರ ನಿರೀಕ್ಷೆ ಹೆಚ್ಚಿದೆ.
13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ (Bengaluru International Film Festival) ಮಾ.3ರಂದು ಆರಂಭ ಆಗಿದೆ. ಉದ್ಘಾಟನಾ ವೇದಿಕೆಯಲ್ಲಿ ಮುನಿರತ್ನ ಅವರು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಸರ್ಕಾರ ನೀಡುತ್ತಿರುವ ಸಹಕಾರದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಚಿತ್ರರಂಗದ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವುದನ್ನು ಮುನಿರತ್ನ ಶ್ಲಾಘಿಸಿದ್ದಾರೆ. ಅದೇ ರೀತಿ ಬಜೆಟ್ನಲ್ಲಿ (Karnataka Budget 2022) ಸಿನಿಮಾರಂಗಕ್ಕೆ ಸರ್ಪ್ರೈಸ್ ಇರಲಿದೆ ಎಂದು ಅವರು ಹೇಳಿದ್ದಾರೆ. ‘ಬಜೆಟ್ ಮಂಡನೆಯಲ್ಲಿ ಕನ್ನಡ ಚಿತ್ರರಂಗವು ಎಂದೂ ಮರೆಯಲಾಗದ ಶುಭ ಸಂದೇಶವನ್ನು ನಮ್ಮ ಮುಖ್ಯಮಂತ್ರಿಗಳು ನೀಡಲಿದ್ದಾರೆ. ಇಂಥ ವೇದಿಕೆಗಳಲ್ಲಿ ಈ ಹಿಂದಿನ ಹಲವು ಮುಖ್ಯಮಂತ್ರಿಗಳಿಗೆ ನಿರ್ಮಾಪಕರು ಮನವಿ ಸಲ್ಲಿಸುತ್ತಿದ್ದರು. ಅದೇ ವೇದಿಕೆಯಲ್ಲೇ ಉತ್ತರ ನೀಡುತ್ತಿರುವ ಮೊದಲ ಮುಖ್ಯಮಂತ್ರಿ ನಮ್ಮ ಬಸವರಾಜ ಬೊಮ್ಮಾಯಿ’ ಎಂದು ಮುನಿರತ್ನ ಹೇಳಿದ್ದಾರೆ.
ಇದನ್ನೂ ಓದಿ:
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್
Karnataka Budget 2022: ಇಂದು ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ ಸಿಎಂ ಬೊಮ್ಮಾಯಿ; ನಿರೀಕ್ಷೆ ಹೆಚ್ಚಳ