ಬ್ಯಾಗ್ ಹಿಡಿದು ನನ್ನ ಹಿಂದೆ ಸುತ್ತುತ್ತಿದ್ದ ಮುನಿಯಪ್ಪ ಹಿಂದಿನದೆಲ್ಲ ಮರೆತಂತಿದೆ: ನಜೀರ್ ಅಹ್ಮದ್, ಎಮ್ಮೆಲ್ಸಿ

|

Updated on: Mar 27, 2024 | 3:53 PM

ಕೋಲಾರದ ನಾಯಕರನ್ನೆಲ್ಲ ತಾನೇ ಮುಖ್ಯವಾಹಿನಿಗೆ ತಂದಿದ್ದು ಅಂತ ಮುನಿಯಪ್ಪ ಹೇಳಿರುವುದಕ್ಕೆ ಕೆರಳಿದ ನಜೀರ್, ಅವರು ಹಿಂದಿನದೆಲ್ಲ ಮರೆತಂತಿದೆ, 1991 ರಲ್ಲಿ ತಾನು ಮಂತ್ರಿಯಾಗಿದ್ದಾಗ ಮುನಿಯಪ್ಪ ಒಂದು ಬ್ಯಾಗ್ ಹಿಡಿದುಕೊಂಡು ನನ್ನ ಹಿಂದೆ ಸುತ್ತುತ್ತಿದ್ದರು ಎಂದರು. ರಾಜೀನಾಮೆ ಸಲ್ಲಿಸುವುದು ತನ್ನ ಮೂಲಭೂತ ಹಕ್ಕು ಎಂದ ಅವರು ಮುಖ್ಯಮಂತ್ರಿಯವರ ಜೊತೆ ಮಾತಾಡಿದ ಬಳಿಕ ಅದನ್ನು ಸಲ್ಲಿಸುವುದಾಗಿ ಹೇಳಿದರು.

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ವಿರುದ್ಧ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಾಗಿರುವ ನಜೀರ್ ಅಹ್ಮದ್ (Nazir Ahmed) ಮತ್ತು ಅನಿಲ್ ಕುಮಾರ್ (Anil Kumar) ಕೆಂಡಕಾರುತ್ತಿದ್ದಾರೆ ಮತ್ತು ಅವರು ರಾಜೀನಾಮೆ ಸಲ್ಲಿಸಲು ಸಭಾಪತಿಯವರ ಕಚೇರಿ ಹೋಗವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಮುನಿಯಪ್ಪ ಅಳಿಯನಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಬಾರದು ಅವರು ಬಂಡೇಳುವ ಹಿಂದಿನ ಕಾರಣ. ಸಭಾಪತಿಯವರ ಕೋಣೆಯಿಂದ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ನಜೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಾವು ಬೆಂಗಳೂರಿಗೆ ಬರುವವರೆಗೆ ಕಾಯುವಂತೆ ಹೇಳಿದ್ದಾರೆ, ಹಾಗಾಗಿ ರಾಜೀನಾಮೆ ಇನ್ನೂ ಸಲ್ಲಿಸಿಲ್ಲ ಎಂದು ಹೇಳಿದರು. ಕೋಲಾರದ ನಾಯಕರನ್ನೆಲ್ಲ ತಾನೇ ಮುಖ್ಯವಾಹಿನಿಗೆ ತಂದಿದ್ದು ಅಂತ ಮುನಿಯಪ್ಪ ಹೇಳಿರುವುದಕ್ಕೆ ಕೆರಳಿದ ನಜೀರ್, ಅವರು ಹಿಂದಿನದೆಲ್ಲ ಮರೆತಂತಿದೆ, 1991 ರಲ್ಲಿ ತಾನು ಮಂತ್ರಿಯಾಗಿದ್ದಾಗ ಮುನಿಯಪ್ಪ ಒಂದು ಬ್ಯಾಗ್ ಹಿಡಿದುಕೊಂಡು ನನ್ನ ಹಿಂದೆ ಸುತ್ತುತ್ತಿದ್ದರು ಎಂದರು. ರಾಜೀನಾಮೆ ಸಲ್ಲಿಸುವುದು ತನ್ನ ಮೂಲಭೂತ ಹಕ್ಕು ಎಂದ ಅವರು ಮುಖ್ಯಮಂತ್ರಿಯವರ ಜೊತೆ ಮಾತಾಡಿದ ಬಳಿಕ ಅದನ್ನು ಸಲ್ಲಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ: ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ