ಮಾಡಿರುವ ಅಭಿವೃದ್ಧಿ ಕಾರ್ಯ ಹಿನ್ನೆಲೆಯಲ್ಲಿ ವೋಟು ಪುನಃ ನನಗೆ ಹಾಕಿ ಅಂತ ಮತದಾರರನ್ನು ಕೇಳಿದರೆ ತಪ್ಪೇನಿದೆ? ಎಮ್ ಪಿ ರೇಣುಕಾಚಾರ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 07, 2022 | 6:32 PM

ತನ್ನ ಕ್ಷೇತ್ರಕ್ಕೆ 3,500 ರಿಂದ 4,000 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಮತ್ತು ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳು ಎದ್ದಾಗ ತಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ ಎಂದು ಶಾಸಕರು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಮ್ ಪಿ ರೇಣುಕಾಚಾರ್ಯ ಕೊಂಚ ವಿಚಲಿತರಾಗಿದ್ದಾರೆ ಮತ್ತು ಗೊಂದಲದಲ್ಲೂ ಇದ್ದಾರೆ. ಅವರು ಹೋದೆಡೆಯೆಲ್ಲ ಮಾಧ್ಯಮದವರು ಹೊನ್ನಾಳಿ ಶಾಸಕ ಕ್ಷೇತ್ರದ ಮತದಾರರಿಗೆ ತನಗೆ ಮಾತ್ರ ವೋಟು ಹಾಕಬೇಕೆಂದು ಪ್ರಮಾಣ ಮಾಡಿಸಿದ್ದ ಬಗ್ಗೆಯೇ ಮೊದಲು ಪ್ರಸ್ತಾಪ ಮಾಡುತ್ತಿದ್ದಾರೆ. ಶುಕ್ರವಾರ ಬೆಂಗಳೂರಲ್ಲಿ ಅವರು ಮಾಧ್ಯಮದವರೆದುರು ತಾನು ಮತದಾರರಿಗೆ ಹೇಳಿರುವುದೇನು ಅನ್ನೋದನ್ನು ಸ್ಪಷ್ಟೀಕರಿಸಲು ಪ್ರಯತ್ನಿಸಿದರು. ನೇರವಾಗಿ ಅದೇ ವಿಷಯವನ್ನು ಪ್ರಸ್ತಾಪಿಸದೆ ಅದಕ್ಕೊಂದು ಬಿಲ್ಡಪ್ ಕೊಟ್ಟರು. ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ರೇಣುಕಾಚಾರ್ಯ ಹೇಳಿಕೊಂಡರು.

ತಮ್ಮ ನಿವಾಸದ ಮುಂದೆ ಜನ ನೆರೆಯುವುದು ಮತ್ತು ತಾನು ಅವರಿಗೆ ಊಟ ಹಾಕಿಸುವುದು ಹೊಸ ವಿಷಯವೇನಲ್ಲ. ಹಾಗೆ ಜನ ಸೇರಿದಾಗ ಅವರು ಭಾರತೀಯ ಜನತಾ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಆಗಿರುವ ಅಭಿವೃದ್ಧಿಯನ್ನು, ಮೋದಿ ಅವರು ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮೊದಲು ಬಿ ಎಸ್ ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳನ್ನು ಜನರಿಗೆ ತಿಳಿಸಿರುವುದಾಗಿ ರೇಣುಕಾಚಾರ್ಯ ಹೇಳಿದರು.

ತನ್ನ ಕ್ಷೇತ್ರಕ್ಕೆ 3,500 ರಿಂದ 4,000 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಮತ್ತು ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳು ಎದ್ದಾಗ ತಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ ಎಂದು ಶಾಸಕರು ಹೇಳಿದರು.

ತಾನು ಮಾಡಿರುವ ಎಲ್ಲ ಕೆಲಸಗಳ ಆಧಾರದಲ್ಲಿ ಜನ ಪುನಃ ತನಗೆ ವೋಟು ಹಾಕಬೇಕು ಮತ್ತು ಯಾರು ತನ್ನ ಪರ ಮತ ಚಲಾಯಿಸುತ್ತೀರಿ ಕೈ ಎತ್ತಿ ಅಂತ ನನ್ನ ಮನೆ ಬಳಿ ನೆರೆದ ಜನರನ್ನು ಕೇಳಿದ್ದು ನಿಜ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ ಮತ್ತು ತಪ್ಪು ಅಂತಲೂ ಅನಿಸುತ್ತಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಇದನ್ನೂ ಓದಿ:   ‘ಟಿಪ್​ ಟಿಪ್​ ಬರ್ಸಾ ಪಾನಿ’ ಹಾಡಿಗೆ ನೃತ್ಯ ಮಾಡಿದ್ದಾರಾ ಪಾಕಿಸ್ತಾನ ಸಂಸತ್ತಿನ ಸದಸ್ಯ: ವಿಡಿಯೋದ ಅಸಲಿಯತ್ತೇನು?

Published on: Jan 07, 2022 06:32 PM