My India My Life Goals: ಉತ್ತಮ ಪರಿಸರ ಮತ್ತು ಸಮಾಜಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ

My India My Life Goals: ಉತ್ತಮ ಪರಿಸರ ಮತ್ತು ಸಮಾಜಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ

ಅರುಣ್​ ಕುಮಾರ್​ ಬೆಳ್ಳಿ
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 09, 2023 | 11:57 AM

ಸಮುದಾಯ ಬೋಜನ ಪದ್ಧತಿಯನ್ನು ಪುನಃ ಪ್ರಚುರಪಡಿಸಬೇಕಿದೆ ಮತ್ತು ಸಮಾನಮಸ್ಕರನ್ನು ಜೊತೆಗೂಡಿಸಿಕೊಡು ಅವುಗಳನ್ನು ಆಯೋಜಿಸಬೇಕಿದೆ. ಭ್ರಾತೃತ್ವದ ಭಾವ ಬೆಳೆಯಲು ಇದು ನೆರವಾಗುತ್ತದೆ.

My India My Life Goals: ನಾವು ಆರೋಗ್ಯವಾಗಿದ್ದರೆ ನಮ್ಮ ಪರಿಸರವೂ ಆರೋಗ್ಯದಿಂದ ನಳನಳಿಸುತ್ತದೆ. ಮುಖ್ಯವಾಗಿ ನಾವು ಆರೋಗ್ಯಕರ ಜೀವನ ಶೈಲಿಯನ್ನು (healthy lifestyle) ಅಳವಡಿಸಿಕೊಳ್ಳಬೇಕಿದೆ. ಸಮತೂಕ ಮತ್ತು ಪೌಷ್ಠಿಕಾಂಶ ಭರಿತ ಆಹಾರ (nutritious food) ಸೇವನೆ ಆರೋಗ್ಯಕ ಜೀವನ ಶೈಲಿಯ ಮುಖ್ಯಭಾಗವಾಗಿದೆ. ಊಟದಲ್ಲಿ ನೈಸರ್ಗಿಕ ಮತ್ತು ಸಾವಯವ ಪದಾರ್ಥಗಳ ಬಳಕೆಗೆ ಆದ್ಯತೆಯಿರಲಿ. ಸಮುದಾಯ ಭೋಜನದ (community meal) ಪರಿಕಲ್ಪನೆಯೇ ನಮ್ಮ ಸ್ಮೃತಿಪಟಲದಿಂದ ಸರಿದು ಹೋಗಿರುವುದು ನಿಜಕ್ಕೂ ದುರದೃಷ್ಟಕ. ಈಗೆಲ್ಲ ನ್ಯೂಕ್ಲಿಯರ್ ಕುಟುಂಬಗಳ ಜಮಾನ. ಗ್ರಾಮೀಣ ಭಾಗಗಳಲ್ಲೂ ನಮಗೆ ಅವಿಭಾಜ್ಯ ಕುಟುಂಬಗಳು ನಮಗೆ ಸಿಗಲಾರವು. ಹಾಗಾಗೇ, ಸಮುದಾಯ ಬೋಜನ ಪದ್ಧತಿಯನ್ನು ಪುನಃ ಪ್ರಚುರಪಡಿಸಬೇಕಿದೆ ಮತ್ತು ಸಮಾನಮಸ್ಕರನ್ನು ಜೊತೆಗೂಡಿಸಿಕೊಡು ಅವುಗಳನ್ನು ಆಯೋಜಿಸಬೇಕಿದೆ. ಎಷ್ಟೋ ಬಡ ಕುಟುಂಬಗಳಿಗೆ ಉಡಲು ಬಟ್ಟೆ ಇರೋದಿಲ್ಲ. ಸ್ಥಿತಿವಂತರಿಂದ ಹಳೆ ಆದರೆ ಬಳಕೆಯೋಗ್ಯ ಬಟ್ಟೆಗಳನ್ನು ಸಂಗ್ರಹಿಸಿ ಒಂದು ಬ್ಯಾಂಕ್ ಮಾಡಿದರೆ, ಬಡವರಿಗೆ ಆಗಾಗ ಅವುಗಳನ್ನು ಹಂಚಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 08, 2023 06:09 PM