Loading video

ನನ್ನ ದೆಹಲಿ ಭೇಟಿ ವಿಚಾರಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಖಾಸಗಿ ಕೆಲಸಕ್ಕೆ ಹೋಗಿದ್ದು: ಪರಮೇಶ್ವರ್

|

Updated on: Feb 24, 2025 | 2:41 PM

ಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವವಣೆ ಬಗ್ಗೆ ತಾನು ಯಾವುದೇ ಬಹಿರಂಗ ಹೇಳಿಕೆ ನೀಡಲ್ಲ, ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳಿಕೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದರು. ಕೊರಟೆಗೆರೆಯಲ್ಲಿ ತಾನು ಮಾತಾಡಿದ್ದು ಬೆಂಬಲಿಗರು ಮತ್ತು ಅಭಿಮಾನಿಗಳ ಅನಿಸಿಕೆಗಳ ಆಧಾರದ ಮೇಲೆ, ಅಲ್ಲಿ ತಾನು ಹೇಳಿದ್ದಕ್ಕೂ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದು ಸಚಿವ ಹೇಳಿದರು.

ತುಮಕೂರು: ಕೆಡಿಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ತಾವು ದೆಹಲಿಗೆ ಹೋಗಿ ಬಂದ ವಿಷಯ ಮತ್ತು ನಾಳೆ ಡಿಕೆ ಶಿವಕುಮಾರ್ ಹೋಗುತ್ತಿರುವ ಸಂಗತಿಗೆ ಹೆಚ್ಚು ಮಹತ್ವ ನೀಡದೆ ಡೌನ್ ಪ್ಲೇ ಮಾಡಿದರು. ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದು, ಅಲ್ಲಿಗೆ ಹೋಗದೆ ಹೆಚ್ಚು ಕಡಿಮೆ ಒಂದು ವರ್ಷವಾಗಿತ್ತು, ದೆಹಲಿಯಲ್ಲಿ ತಮ್ಮ ಹೆಡ್ ಕ್ವಾರ್ಟರ್ (ಎಐಸಿಸಿ ಕೇಂದ್ರ ಕಚೇರಿ) ಇರೋದ್ರಿಂದ ಹೋದಾಗೆಲ್ಲ ಅಲ್ಲಿಗೆ ಭೇಟಿ ನೀಡುವುದು ವಾಡಿಕೆ, ತಮ್ಮ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲವೆಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯತ್ತಿದ್ದ ಕೆಡಿಪಿ ಸಭೆಯಿಂದ ಕೋಪ ಕಾರುತ್ತಾ ಹೊರನಡೆದ ಬಿಜೆಪಿ ಶಾಸಕ ಸುರೇಶ್ ಗೌಡ