Mysore Dasara 2025: ದಸರಾ ಮೆರುಗು ಹೆಚ್ಚಿಸುವ ಸ್ತಬ್ಧಚಿತ್ರಗಳ ತಯಾರಿ ಹೇಗಿರುತ್ತೆ ನೋಡಿ
ಮೈಸೂರಿನಲ್ಲಿ ನಾಳೆ ನಡೆಯಲಿರುವ ಜಂಬೂ ಸವಾರಿಯ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸ್ತಬ್ಧಚಿತ್ರಗಳನ್ನು ತಯಾರಿಸಲಾಗಿದೆ. ಕಳೆದ 24 ವರ್ಷಗಳಿಂದ ಈ ಕಲೆಯಲ್ಲಿ ನಿರತರಾದ ಕಲಾವಿದರು ತಮ್ಮ ತಂಡದೊಮದಿಗೆ ಚಿತ್ರಗಳನ್ನು ತಯಾರಿಸಿದ್ದಾರೆ. ವಿಜಯನಗರ ಮತ್ತು ಬಳ್ಳಾರಿಯ ಸ್ತಬ್ಧಚಿತ್ರಗಳನ್ನು ತಯಾರಿಸಿರುವ ಇವರು ನಾಳೆ ಮೈಸೂರು ಅರಮನೆಯತ್ತ ತೆರಳಲಿದ್ದಾರೆ.
ಮೈಸೂರು, ಅಕ್ಟೋಬರ್ 1 : ನಾಳೆ (ಅ.2) ನಡೆಯಲಿರುವ ಜಂಬೂ ಸವಾರಿಯ ಹಿನ್ನೆಲೆ ಸಕಲ ಸಿದ್ದತೆಗಳೂ ಅಂತಿಮ ಹಂತದಲ್ಲಿವೆ. ಜಂಬೂ ಸವಾರಿಗಾಗಿ ಸ್ತಬ್ಧಚಿತ್ರಗಳ ತಯಾರಿ ಭರದಿಂದ ಸಾಗಿದೆ. ವಿಜಯನಗರ,ಬಳ್ಳಾರಿ ಸೇರಿ ರಾಜ್ಇಯದ ವಿವಿಧ ಜಿಲ್ಲೆಗಳ ಸಂಸ್ಕೃತಿಯನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳ ತಯಾರಿಕೆ ನಡೆಯುತ್ತಿದೆ. ನಂಜನಗೂಡು ರಸ್ತೆಯಲ್ಲಿ ಚಿತ್ರಗಳನ್ನು ಇರಿಸಲಾಗಿದ್ದು, ಕಳೆದ 24 ವರ್ಷಗಳಿಂದ ಈ ಕಲೆಯಲ್ಲಿ ತೊಡಗಿಸಿಕೊಂಡಿರುವ ಕಲಾಕಾರರು ಈ ಚಿತ್ರಗಳನ್ನು ತಯಾರು ಮಾಡಿದ್ದಾರೆ.
Latest Videos

