ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ವಿಶೇಷ ಅಂದ್ರೆ ಎಲ್ಲಾ ಕಾರುಗಳ ಸಂಖ್ಯೆ 1953
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ಇಂದು ಆಯುಧ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 11:32 ರಿಂದ 11:52ರ ಒಳಗೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಿತು. ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳಿಗೂ ಪೂಜೆ ಮಾಡಲಾಯಿತು
ಮೈಸೂರು, (ಅಕ್ಟೋಬರ್ 20): ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ಇಂದು ಆಯುಧ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 11:32 ರಿಂದ 11:52ರ ಒಳಗೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಿತು. ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳಿಗೂ ಪೂಜೆ ಮಾಡಲಾಯಿತು.
ಇನ್ನು ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಸೇರಿ ರಾಜ ಮನೆತನದವರು ಬಳಸುತ್ತಿರುವ ವಾಹನಗಳು, ಅರಮನೆಯ ಕತ್ತಿ, ಈಟಿ, ಗುರಾಣಿ, ಸೇರಿದಂತೆ ಅರಮನೆಯ ಆಯುಧಗಳಿಗೆ ಹಾಗೇ ಜಂಬೂ ಸವಾರಿಯ ದಿನ ಕುಶಲ ತೋಪು ಸಿಡಿಸಲು ಬಳಸುವ ಪಿರಂಗಿ ಗಾಡಿಗಳಿಗೂ ಪೂಜೆ ಸಲ್ಲಿಸಲಾಯಿತು. ರಾಜಮನೆತನದ ಎಲ್ಲಾ ಕಾರುಗಳು ಸಂಖ್ಯೆ 1953 ಎನ್ನುವದೇ ವಿಶೇಷ. ಯಾಕಂದ್ರೆ, ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ 1953ರಲ್ಲಿ ಜನಿಸಿದ್ದರು. ಹೀಗಾಗಿ ಎಲ್ಲಾ ಕಾರುಗಳಿಗೆ ಅದೇ ಸಂಖ್ಯೆ ಇದೆ.

