AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಆರೈಕೆ ಮಾಡೋ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!

ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಆರೈಕೆ ಮಾಡೋ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!

ಮಂಗಳ ರಾಜ್
| Edited By: |

Updated on: Oct 20, 2026 | 12:00 PM

Share

ಮೈಸೂರು ಅರಮನೆಯಲ್ಲಿ ಆಯುಧ ಪೂಜೆಗೆ ಸಿದ್ಧಗೊಂಡಿದ್ದ ಪ್ರೀತಿ ಮತ್ತು ಚಂಚಲ್ ಆನೆಗಳ ಕುರಿತು ವಿಶೇಷ ವರದಿ. ರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಂದ ಪೂಜೆಗೊಳಗಾದ ಆನೆಗಳಿಗೆ ಸುಂದರ ಅಲಂಕಾರ ಮಾಡಲಾಗಿತ್ತು. ಆರೈಕೆದಾರ ಪಾಷಾಬಾಯಿ, ಪ್ರೀತಿಯ ಸ್ನೇಹಪರ ಸ್ವಭಾವ, ದಸರಾ ಸಡಗರ, ವಿಶೇಷ ಆಹಾರ ಹಾಗೂ ರಾಜಮನೆತನದೊಂದಿಗಿನ ಬಾಂಧವ್ಯದ ಕುರಿತು ವಿವರಿಸಿದ್ದಾರೆ.

ಮೈಸೂರು, ಅಕ್ಟೋಬರ್ 20: ಮೈಸೂರು ಅರಮನೆಯಲ್ಲಿ ದಸರಾ ಆಯುಧ ಪೂಜೆಯ ಪ್ರಯುಕ್ತ ವಿಶೇಷ ಸಿದ್ಧತೆಗಳು ನಡೆದಿದ್ದವು. ಈ ವರ್ಷದ ದಸರಾಗೆ ಅರಮನೆಯ ಆನೆಗಳಾದ ಪ್ರೀತಿ ಮತ್ತು ಚಂಚಲ್ ಆನೆಯು ಪೂಜೆಗಾಗಿ ಸಿದ್ಧಗೊಂಡಿದ್ದವು. ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಈ ಆನೆಗಳಿಗೆ ಪೂಜೆಯನ್ನು ಸಲ್ಲಿಸಿದರು. ಪಟ್ಟದಾನೆ, ಪಟ್ಟದ ಹಸುಗಳು ಮತ್ತು ಕುದುರೆಗಳ ಜೊತೆ ಆನೆಗಳಿಗೂ ಪೂಜೆ ನಡೆಸುವುದು ಸಂಪ್ರದಾಯವಾಗಿದೆ.

ಆಯುಧ ಪೂಜೆಯ ಅಂಗವಾಗಿ ಆನೆಗಳಿಗೆ ಬಣ್ಣಗಳಿಂದ ಸುಂದರ ಅಲಂಕಾರ ಮಾಡಲಾಗಿತ್ತು. ಅವುಗಳ ಹಣೆ ಮೇಲೆ ಅರ್ಧಚಂದ್ರಾಕೃತಿ, ರಾಜರ ಗಂಡಭೇರುಂಡ ಲಾಂಛನ ಹಾಗೂ ವಿಷ್ಣುವಿನ ಶಂಖು ಚಕ್ರಗಳಂತಹ ಬೊಟ್ಟುಗಳನ್ನು ಬರೆಯಲಾಗಿತ್ತು. ಆನೆಗಳ ಆರೈಕೆ ಮಾಡುವ ಪಾಷಾಬಾಯಿ, ಪ್ರೀತಿ ಆನೆಯ ಸ್ವಭಾವದ ಕುರಿತು ವಿವರಿಸಿದರು. ಪ್ರೀತಿ ಆನೆಯು ಅತ್ಯಂತ ಮುದ್ದಾಗಿದ್ದು, ಎಲ್ಲರ ಜೊತೆ ಸ್ನೇಹಪರವಾಗಿರುತ್ತದೆ ಎಂದು ಹೇಳಿದರು. ದಸರಾ ಸಮಯದಲ್ಲಿ ಪ್ರೀತಿ ಹೆಚ್ಚು ಖುಷಿಯಾಗಿರುತ್ತದೆ ಮತ್ತು ಅಲಂಕಾರವನ್ನು ಇಷ್ಟಪಡುತ್ತದೆ ಎಂದೂ ಅವರು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಗಳ ರಾಜ್
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More