ಇಂದಿನಿಂದ 3 ದಿನ ಟಿ ನರಸೀಪುರದಲ್ಲಿ ಕುಂಭಮೇಳ: ಸಿದ್ಧತೆ ಹೇಗಿದೆ ನೋಡಿ

Edited By:

Updated on: Feb 10, 2025 | 8:06 AM

ಅತ್ತ ಉತ್ತರ ಪ್ರದೇಶದ ಪ್ರಯಾಗ್ ರಾಜ್​ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದರೆ, ಇತ್ತ ಕರ್ನಾಟಕದ ಮೈಸೂರು ಜಿಲ್ಲೆಯ ಟಿ ನರಸೀಪುರ ಕೂಡ ಕುಂಭಮೇಳಕ್ಕೆ ಸಿದ್ಧವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಪುಣ್ಯ ಸ್ನಾನಕ್ಕೆ ಅವಕಾಶವಿದ್ದು, ಸಿದ್ಧತೆ ಹೇಗಿದೆ? ಏನೇನು ಕಾರ್ಯಕ್ರಮಗಳು ಇರಲಿವೆ ಎಂಬ ವಿವರ ಇಲ್ಲಿದೆ ನೋಡಿ.

ಮೈಸೂರು, ಫೆಬ್ರವರಿ 10: ಮೈಸೂರು ಜಿಲ್ಲೆ ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ 3 ದಿನ ಕುಂಭಮೇಳ ನಡೆಯಲಿದೆ. ತ್ರಿವೇಣಿ ಸಂಗಮದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ. ಮೂರು ವೇದಿಕೆಗಳಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಮೂರು ಕಡೆ ಸ್ಥಳ ನಿಯೋಜನೆ ಮಾಡಲಾಗಿದೆ. ಅಗಸ್ತೇಶ್ವರ ದೇವಾಲಯ, ಗುಂಜಾನರಸಿಂಹಸ್ವಾಮಿ ದೇವಾಲಯ, ಭಿಕ್ಷೇಶ್ವರ ದೇವಸ್ಥಾನದ‌ ಬಳಿ ಪುಣ್ಯಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೂರು ದಿನವೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಿದ್ಧತೆ ಹೇಗಿದೆ ಎಂಬ ವಿಡಿಯೋ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ