Kannada Rajyotsava: ಮೈಸೂರಿನ ಭುವನೇಶ್ವರಿ ತಾಯಿಗೆ ಸಚಿವ ಮಹದೇವಪ್ಪ ವಿಶೇಷ ಪೂಜೆ

| Updated By: ಆಯೇಷಾ ಬಾನು

Updated on: Nov 01, 2023 | 3:40 PM

ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ. ಮೈಸೂರಿನ ಅರಮನೆಯ ಆವರಣದಲ್ಲಿರುವ ಜೈ ಭುವನೇಶ್ವರಿ ದೇವಸ್ಥಾನದಲ್ಲಿ‌ ವಿಶೇಷ ಪೂಜೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌ ಸಿ ಮಹದೇವಪ್ಪ ಪೂಜೆ ಸಲ್ಲಿಸಿದರು. ಅರಮನೆಯ ಬಲರಾಮ ದ್ವಾರದಿಂದ ಓವಲ್ ಮೈದಾನದವರೆಗೆ ಜೈಭುವನೇಶ್ವರಿ ಪ್ರತಿಮೆ ಮೆರವಣಿಗೆ ನಡೆಯಿತು.

ಮೈಸೂರು, ನ.01: ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ (Kannada Rajyotsava). ಕರ್ನಾಟಕ ಏಕೀಕರಣಕ್ಕೆ 50 ವರ್ಷ ಸಂದಿರುವ ಹಿನ್ನೆಲೆ ಈ ಬಾರಿ ರಾಜ್ಯೋತ್ಸವದ‌ ಸಂಭ್ರಮ ಹೆಚ್ಚಿದೆ. ಮೈಸೂರಿನಲ್ಲಿರುವ (Mysuru) ಕನ್ನಡಾಂಬೆ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮೈಸೂರು ರೈಲು ನಿಲ್ದಾಣದಿಂದ 3 ಕಿಮೀ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿಮೀ ದೂರ ಮೈಸೂರಿನ ಅರಮನೆಯ ಆವರಣದಲ್ಲಿರುವ ಜೈ ಭುವನೇಶ್ವರಿ ದೇವಸ್ಥಾನದಲ್ಲಿ‌ ವಿಶೇಷ ಪೂಜೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌ ಸಿ ಮಹದೇವಪ್ಪ ಪೂಜೆ ಸಲ್ಲಿಸಿದರು. ಅರಮನೆಯ ಬಲರಾಮ ದ್ವಾರದಿಂದ ಓವಲ್ ಮೈದಾನದವರೆಗೆ ಜೈಭುವನೇಶ್ವರಿ ಪ್ರತಿಮೆ ಮೆರವಣಿಗೆ ನಡೆಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ