ಮೈಸೂರು ದಸರಾ 2022: ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿ ಯದುವೀರ್ ಶ್ರೀಕಂಠದತ್ತ ಒಡೆಯರೊಂದಿಗೆ ಎಕ್ಸ್ಕ್ಲ್ಯೂಸಿವ್ ಮಾತುಕತೆ
ದಸರಾ ಉತ್ಸವ, ಅದರ ಸಿದ್ಧತೆಗಳು, ಇತಿಹಾಸ, ಸಂಸ್ಕೃತಿ-ಪರಂಪರೆ, ಮತ್ತು ಒಡೆಯರ್ ಪ್ರತಿನಿಧಿಯಾಗಿ ತಮ್ಮ ಮೇಲಿರುವ ಜವಾಬ್ದಾರಿಗಳು, ರಾಜಮಾತೆ ಪ್ರಮೋದಾ ದೇವಿಯವರ ಸಲಹೆ, ಮಾರ್ಗದರ್ಶನ, ರಾಜಕೀಯ ಮೊದಲಾದವುಗಳ ಬಗ್ಗೆ ಮಾತಾಡಿದ್ದಾರೆ.
ಮೈಸೂರು: ವೈಭವದ ಮೈಸೂರು ದಸರಾ ಉತ್ಸವದ ಕೊನೆಯ ದಿನವಾಗಿರುವ ಇಂದು ವಿಶ್ವಪ್ರಸಿದ್ಧ ಜಂಬೂ ಸವಾರಿ ನಡೆಯಲಿದೆ. ಈ ಸಂದರ್ಭದಲ್ಲಿ ಟಿವಿ9 ಕನ್ನಡ ವಾಹಿನಿಯ ನಿರೂಪಕ ಮಾಲ್ತೇಶ್ ಅವರು ಹಿಂದಿನ ಒಡೆಯರ್ ಅರಸೊತ್ತಿಗೆಯ (Wodeyar Dynasty) ಪ್ರತಿನಿಧಿಯಾಗಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishna Dutta Chamaraja Wodeyar) ಅವರೊಂದಿಗೆ ಒಂದು ಎಕ್ಸ್ಕ್ಲ್ಯೂಸಿವ್ ಮಾತುಕತೆ ನಡೆಸಿದ್ದಾರೆ. ಯದುವೀರ ಅವರು; ದಸರಾ ಉತ್ಸವ, ಅದರ ಸಿದ್ಧತೆಗಳು, ಇತಿಹಾಸ, ಸಂಸ್ಕೃತಿ-ಪರಂಪರೆ, ಮತ್ತು ಒಡೆಯರ್ ಪ್ರತಿನಿಧಿಯಾಗಿ ತಮ್ಮ ಮೇಲಿರುವ ಜವಾಬ್ದಾರಿಗಳು, ರಾಜಮಾತೆ ಪ್ರಮೋದಾ ದೇವಿಯವರ (Pramoda Devi ) ಸಲಹೆ, ಮಾರ್ಗದರ್ಶನ ಮೊದಲಾದವುಗಳ ಬಗ್ಗೆ ಮಾತಾಡಿದ್ದಾರೆ.