Jamboo Savari: ಜಂಬೂ ಸವಾರಿ ವೇಳೆ ರಾರಾಜಿಸಿತು ಅಪ್ಪು ಫೋಟೋ; ಫ್ಯಾನ್ಸ್ ಮನದಲ್ಲಿ ಪುನೀತ್ ಶಾಶ್ವತ
Puneeth Rajkumar: ಪ್ರತಿ ಕ್ಷಣವೂ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಾರೆ. ಜಂಬೂ ಸವಾರಿ ಸಮಯದಲ್ಲೂ ಅದು ಸಾಬೀತಾಗಿದೆ.
ಅದ್ದೂರಿಯಾಗಿ ದಸರಾ (Dasara 2022) ಹಬ್ಬವನ್ನು ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಜಂಬೂ ಸವಾರಿಯ ಸಡಗರ ಕಳೆಗಟ್ಟಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಈ ವೇಳೆ ಪುನೀತ್ ರಾಜ್ಕುಮಾರ್ ಫೋಟೋ ರಾರಾಜಿಸಿದೆ. ಜಂಬೂ ಸವಾರಿ ನೋಡಲು ಬಂದಿದ್ದ ಅಭಿಮಾನಿಗಳು ಅಪ್ಪು ಫೋಟೋ (Puneeth Rajkumar Photo) ಹಿಡಿದು ಜಯಕಾರ ಹಾಕಿದ್ದಾರೆ. ಫ್ಯಾನ್ಸ್ ಮನದಲ್ಲಿ ಅಪ್ಪು ಶಾಶ್ವತವಾಗಿ ನೆಲೆಸಿರುತ್ತಾರೆ ಎಂಬುದಕ್ಕೆ ಇಂಥ ಹಲವು ಉದಾಹರಣೆಗಳು ಇವೆ. ಪ್ರತಿ ಕ್ಷಣವೂ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಾರೆ. ಜಂಬೂ ಸವಾರಿ ಸಮಯದಲ್ಲೂ ಅದು ಸಾಬೀತಾಗಿದೆ.
Published on: Oct 05, 2022 04:05 PM
Latest Videos