ಭೀಮನಕೊಲ್ಲಿಗೆ ತೆರಳಿ ಮಹದೇಶ್ವರ ದರ್ಶನ ಪಡೆದರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ!
ಬುಧವಾರ ಅವರು ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ ಕಬಿನಿ ಹಿನ್ನೀರಿನಲ್ಲಿರುವ ಭೀಮನಕೊಲ್ಲಿ ಮಹದೇಶ್ವರ ದೇಗುಲಕ್ಕೆಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆದರು.
ಮೈಸೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಕರ್ನಾಟಕದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವುದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಬುಧವಾರ ಅವರು ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ ಕಬಿನಿ ಹಿನ್ನೀರಿನಲ್ಲಿರುವ (Kabini Backwaters) ಭೀಮನಕೊಲ್ಲಿ ಮಹದೇಶ್ವರ ದೇಗುಲಕ್ಕೆ (Mahadeshwara Temple ) ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆದರು. ಸುತ್ತಮುತ್ತಲ ಊರುಗಳ ಜನ ಸೋನಿಯಾರನ್ನು ನೋಡಲು ಅಗಮಿಸಿರುವುದು ವಿಡಿಯೋದಲ್ಲಿ ಕಾಣಬಹುದು.
Latest Videos