ದಸರಾ ಉದ್ಘಾಟನೆ ವೇದಿಕೆಯಲ್ಲಿ ಏಕಾಏಕಿ ಸಿಟ್ಟಿಗೆದ್ದ ಸಿದ್ದರಾಮಯ್ಯ: ರೊಚ್ಚಿಗೆದ್ದು ಬೈದಿದ್ದು ಹೇಗೆ ನೋಡಿ!
ಮೈಸೂರು ದಸರಾ 2025ರ ಉದ್ಘಾಟನಾ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಎದ್ದುಹೊರಡುವುದನ್ನು ನೋಡಿ ಕೆರಳಿ ಸಿಟ್ಟಿಗೆದ್ದ ಸಿಎಂ ಆಕ್ರೋಶದಿಂದ ಬೈದೇಬಿಟ್ಟರು. ನಂತರ ಯಾರನ್ನೂ ಹೊರಹೋಗಲು ಬಿಡಬೇಡಿ ಎಂದು ಪೊಲೀಸರಿಗೆ ಸೂಚನೆ ನೀಡಿದರು. ಸಿದ್ದರಾಮಯ್ಯ ಕೆಲವರನ್ನು ಬೈಯುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮೈಸೂರು, ಸೆಪ್ಟೆಂಬರ್ 22: ಮೈಸೂರು ದಸರಾ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಉದ್ಘಾಟಕಿ ಬಾನು ಮುಷ್ತಾಕ್ ಹಾಗೂ ಸಚಿವ ಹೆಚ್ಸಿ ಮಹದೇವಪ್ಪ ಮಾತನಾಡಿದ ನಂತರ ಸಿಎಂ ಸಿದ್ದರಾಮಯ್ಯ ಮಾತು ಆರಂಭಿಸಿದರು. ಈ ಸಂದರ್ಭದಲ್ಲಿ ಕೆಲವರು ಎದ್ದುಹೊರಡಲು ಅನುವಾದದ್ದನ್ನು ಕಂಡು ಏಕಾಏಕಿ ಸಿಟ್ಟಿಗೆದ್ದ ಅವರು, ಸಿಟ್ಟಿನಿಂದ ಬೈದೇ ಬಿಟ್ಟರು. ‘‘ಏಯ್, ಇನ್ನು ಸ್ವಲ್ಪ ಹೊತ್ತು ಕೂತ್ಕೊಳ್ಳಕ್ಕಾಗಲ್ವೇನಯ್ಯಾ ನಿಂಗೆ? ಏಯ್ ಅವ್ನು ಯಾವನವನ್, ಒಂದು ಸಾರಿ ಹೇಳಿದ್ರೆ ಗೊತ್ತಾಗಲ್ವಾ ನಿಮಗೆ? ಯಾಕೆ ಬರ್ತೀರಿ ನೀವು ಇಲ್ಲಿಗೆ? ಮನೆಯಲ್ಲಿ ಇರ್ಬೇಕಾಗಿತ್ತು. ಒಂದರ್ಧ ಗಂಟೆ ನೆಟ್ಟಗೆ ಕುಳಿತುಕೊಳ್ಳಲಾಗದಿದ್ರೆ ಯಾಕೆ ಬರ್ತೀರಿ ಇಲ್ಲಿಗೆ’’ ಎಂದು ಆಕ್ರೋಶದಿಂದ ನುಡಿದರು. ನಂತರ, ಯಾರನ್ನೂ ಹೊರಬಿಡಬೇಡಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಮಾತು ಮುಂದುವರಿಸಿದರು.
Published on: Sep 22, 2025 12:29 PM
