ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅಭಿಮನ್ಯು ಗತ್ತು ನೋಡಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ದತೆ ಜೋರಾಗಿದೆ. ಅಶ್ವಾರೋಹಿ ದಳ ಆನೆಗಳಿಗೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸಮ್ಮುಖದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ 21 ಬಾರಿ ಕುಶಾಲತೋಪು ಸಿಡಿಸಿ ಸಶಸ್ತ್ರ ಮೀಸಲು ಪಡೆ ಪೊಲೀಸರು ತಾಲೀಮು ಶುರು ಮಾಡಿದ್ದಾರೆ. ಇಂದಿನ ಕುಶಾಲತೋಪು ತಾಲೀಮಿನಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಲಕ್ಷ್ಮೀ, ಭೀಮ, ಏಕಲವ್ಯ ಸೇರಿ ಒಟ್ಟು 14 ಆನೆಗಳು ಭಾಗಿಯಾಗಿವೆ. ಇದೇ ವೇಳೆ ಸಿಡಿಮದ್ದು ಶಬ್ದಕ್ಕೆ ಶ್ರೀಕಂಠ, ಹೇಮಾವತಿ ಆನೆಗಳು ಸ್ವಲ್ಪ ವಿಚಲಿತಗೊಂಡಿವೆ. ಇನ್ನು ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗಿದ್ದು, ಮರದ ಅಂಬಾರಿ ಹೊತ್ತು ರಾಜ ಬೀದಿಯಲ್ಲಿ ಗಜಗಾಂಭೀರ್ಯದಿದ ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕುತ್ತಿದ್ದನ್ನು ನೋಡಲು ಜನ ಮುಗಿಬಿದ್ದಿದ್ದರು.
ಮೈಸೂರು, (ಸೆಪ್ಟೆಂಬರ್ 15): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ದತೆ ಜೋರಾಗಿದೆ. ಅಶ್ವಾರೋಹಿ ದಳ ಆನೆಗಳಿಗೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸಮ್ಮುಖದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ 21 ಬಾರಿ ಕುಶಾಲತೋಪು ಸಿಡಿಸಿ ಸಶಸ್ತ್ರ ಮೀಸಲು ಪಡೆ ಪೊಲೀಸರು ತಾಲೀಮು ಶುರು ಮಾಡಿದ್ದಾರೆ. ಇಂದಿನ ಕುಶಾಲತೋಪು ತಾಲೀಮಿನಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಲಕ್ಷ್ಮೀ, ಭೀಮ, ಏಕಲವ್ಯ ಸೇರಿ ಒಟ್ಟು 14 ಆನೆಗಳು ಭಾಗಿಯಾಗಿವೆ. ಇದೇ ವೇಳೆ ಸಿಡಿಮದ್ದು ಶಬ್ದಕ್ಕೆ ಶ್ರೀಕಂಠ, ಹೇಮಾವತಿ ಆನೆಗಳು ಸ್ವಲ್ಪ ವಿಚಲಿತಗೊಂಡಿವೆ. ಇನ್ನು ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗಿದ್ದು, ಮರದ ಅಂಬಾರಿ ಹೊತ್ತು ರಾಜ ಬೀದಿಯಲ್ಲಿ ಗಜಗಾಂಭೀರ್ಯದಿದ ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕುತ್ತಿದ್ದನ್ನು ನೋಡಲು ಜನ ಮುಗಿಬಿದ್ದಿದ್ದರು.
Published on: Sep 15, 2025 07:56 PM
