AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ ರದ್ದು!

ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ ರದ್ದು!

ಸುನಿಲ್​ ಎಮ್​ ಹೆಚ್​
| Edited By: |

Updated on:Oct 21, 2026 | 1:00 PM

Share

ಮೈಸೂರು ದಸರಾ 2026ರ ಸಾಂಪ್ರದಾಯಿಕ ಜಟ್ಟಿ ಕಾಳಗ ರದ್ದಾಗಿದೆ ಎಂಬ ಗೊಂದಲಗಳಿಗೆ ತೆರೆ ಬಿದ್ದಿದ್ದು, ರಾಜಮನೆತನದ ಸಮ್ಮುಖದಲ್ಲಿ ಐತಿಹಾಸಿಕ ವಜ್ರಮುಷ್ಠಿ ಕಾಳಗ ನೆರವೇರಲಿದೆ. ವಿಜಯದಶಮಿಯಂದು ಅರಮನೆಯ ಸವಾರಿ ತೊಟ್ಟಿಯಲ್ಲಿ ರಾಜನಿಷ್ಠೆ ಹಾಗೂ ಶ್ರೇಯಸ್ಸಿನ ಸಂಕೇತವಾಗಿ ಜಟ್ಟಿಗಳು ಈ ಸಾಂಪ್ರದಾಯಿಕ ಕಾಳಗದಲ್ಲಿ ಸೆಣಸಲಿದ್ದಾರೆ.

ಮೈಸೂರು, ಅಕ್ಟೋಬರ್ 21: ಮೈಸೂರು ದಸರಾ ಮಹೋತ್ಸವ 2026ರ ಸಂದರ್ಭದಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ ಸಾಂಪ್ರದಾಯಿಕ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ. ದಸರಾ ಆಚರಣೆಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಈ ಪದ್ಧತಿಯು ಈ ಬಾರಿ ರದ್ದುಗೊಳ್ಳುತ್ತದೆ ಎಂಬ ಗೊಂದಲ ಏರ್ಪಟ್ಟಿತ್ತು. ಈ ಬಾರಿ, ಕಾಳಗಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದರೂ, ಅಂತಿಮ ಕ್ಷಣದಲ್ಲಿ ರದ್ದು ಮಾಡಲಾಗಿತ್ತು. ನೂಕುನುಗ್ಗಲು ಮತ್ತು ವಿಜಯದಶಮಿ ಮೆರವಣಿಗೆಯ ಮುಹೂರ್ತ ಮೀರುವ ಆತಂಕದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು.

ಜಟ್ಟಿ ಕಾಳಗವು ಕೇವಲ ಒಂದು ಸೆಣಸಾಟವಾಗಿರದೆ, ಯದುವಂಶದ ರಾಜನಿಷ್ಠೆ ಮತ್ತು ಶ್ರೇಯಸ್ಸನ್ನು ಬಯಸಿ ನಡೆಸುವ ಒಂದು ಸಾಂಕೇತಿಕ ಆಚರಣೆಯಾಗಿದೆ. ವಿಜಯದಶಮಿ ಮೆರವಣಿಗೆ ಆರಂಭಕ್ಕೂ ಮುನ್ನ, ಅರಮನೆಯ ಸವಾರಿ ತೊಟ್ಟಿಯಲ್ಲಿ ಜಟ್ಟಿಗಳು ತಮ್ಮ ತಲೆಗಳಿಗೆ ಹುಲಿ ಉಗುರಿನಿಂದ ಹೊಡೆದು, ರಕ್ತವನ್ನು ನೆಲಕ್ಕೆ ಸುರಿಸುವ ಮೂಲಕ ರಾಜಮನೆತನಕ್ಕಾಗಿ ತಮ್ಮ ಬಲಿದಾನಕ್ಕೆ ಸಿದ್ಧವೆಂಬ ಸಂದೇಶವನ್ನು ಸಾರುತ್ತಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 21, 2026 12:00 PM

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​