ಮೈಸೂರು ದಸರಾ 2026: ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ! ಪ್ರೇಕ್ಷಕರಿಗೆ ನಿರಾಸೆ
ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರ್ ಶೋ ಹವಾಮಾನ ವೈಪರೀತ್ಯದಿಂದಾಗಿ ಅರ್ಧದಲ್ಲೇ ರದ್ದಾಗಿದೆ. ಟಿಕೆಟ್ ಪಡೆದು ಬೆಳಿಗ್ಗೆಯಿಂದ ಕಾದು ಕುಳಿತಿದ್ದ ಜನರಿಗೆ ನಿರಾಸೆಯಾಗಿದ್ದು, ವಿಮಾನಗಳು ಮೂರು ಸುತ್ತು ಹಾರಾಟ ನಡೆಸಿ ಯೆಲಹಂಕ ವಾಯುನೆಲೆಗೆ ಮರಳಿವೆ. ನಾಳೆ ವಾತಾವರಣ ಅನುಕೂಲಕರವಾಗಿದ್ದರೆ ಪೂರ್ಣಪ್ರಮಾಣದ ಪ್ರದರ್ಶನ ನಡೆಯಲಿದೆ ಎಂದು ವಾಯುಪಡೆ ತಿಳಿಸಿದೆ.
ಮೈಸೂರು, ಅಕ್ಟೋಬರ್ 18: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಭಾರತೀಯ ವಾಯುಪಡೆಯ ‘ಸೂರ್ಯ ಕಿರಣ್ ಏರೋಬ್ಯಾಟಿಕ್ಸ್’ ಸಾಹಸ ಪ್ರದರ್ಶನವು ಹವಾಮಾನ ವೈಪರೀತ್ಯದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಏರ್ ಶೋ ವೀಕ್ಷಿಸಲು ಟಿಕೆಟ್ ಪಡೆದು ಬೆಳಿಗ್ಗೆಯಿಂದಲೇ ಗಂಟೆಗಟ್ಟಲೆ ಕಾದುಕುಳಿತಿದ್ದ ಸಾವಿರಾರು ಜನರಿಗೆ ತೀವ್ರ ನಿರಾಸೆಯಾಗಿದೆ. ನಿಗದಿತ ಸಮಯಕ್ಕೆ ಆಗಮಿಸಿದ ವಿಮಾನಗಳು ಕೇವಲ ಮೂರು ಸುತ್ತುಗಳ ಹಾರಾಟವನ್ನು ಮಾತ್ರ ನಡೆಸಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ವಾಪಸ್ ಬೆಂಗಳೂರಿನ ಯೆಲಹಂಕ ವಾಯುನೆಲೆಗೆ ಮರಳಿದವು. ಆದರೆ, ನಾಳೆ ಹವಾಮಾನ ಸುಧಾರಿಸಿದರೆ ಪೂರ್ಣ ಪ್ರಮಾಣದ ಶೋ ನಡೆಸಲಾಗುವುದು ಎಂದು ವಾಯುಪಡೆ ಸಿಬ್ಬಂದಿ ಭರವಸೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us