Mysuru Dasara: ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?

Edited By:

Updated on: Jun 19, 2025 | 12:20 PM

ಈ ವರ್ಷದ ಮೈಸೂರು ದಸರಾ ಆಚರಣೆ 11 ದಿನ ನಡೆಯಲಿದೆ. ಸಾಮಾನ್ಯವಾಗಿ 10 ದಿನಗಳ ಆಚರಣೆಯಾಗುವ ದಸರಾ ಈ ಬಾರಿ ಪಂಚಮಿ ತಿಥಿಯ ಎರಡು ದಿನಗಳಿಂದಾಗಿ 11 ದಿನಗಳವರೆಗೆ ನಡೆಯಲಿದೆ. ಇದು ಜನರಲ್ಲಿ ಕುತೂಹಲ ಮತ್ತು ಗೊಂದಲವನ್ನು ಉಂಟುಮಾಡಿದೆ. ವಿಡಿಯೋ ನೋಡಿ.

ಮೈಸೂರು, ಜೂನ್​ 19: ವಿಶ್ವ ವಿಖ್ಯಾತ ಮೈಸೂರು ದಸರಾ (Dasara) ಆಚರಣೆ ಈ ಬಾರಿ 11 ದಿನ ನಡೆಯಲಿದೆ. ಪ್ರತಿ ವರ್ಷ 9 ದಿನ ನವರಾತ್ರಿ 10ನೇ ದಿನ ವಿಜಯದಶಮಿ ಆಚರಣೆ ಮಾಡುವುದು ವಾಡಿಕೆ. ಆದರೆ ಮಧ್ಯೆದಲ್ಲಿ  ಪಂಚಮಿ ತಿಥಿ ಎರಡು ದಿನ ಬಂದಿದ್ದರಿಂದ ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 22ಕ್ಕೆ ದಸರಾ ಉದ್ಘಾಟನೆಗೊಳ್ಳಲಿದ್ದು, ಅಕ್ಟೋಬರ್ 2ಕ್ಕೆ ವಿಜಯದಶಮಿ ಆಚರಿಸಲಾಗುವುದು. ಈ ಬಗ್ಗೆ ಟಿವಿ9ಗೆ ಡಾ ಶೆಲ್ವ ಪಿಳೈ ಅಯ್ಯಂಗಾರ್ ಹೇಳಿಕೆ ನೀಡಿದ್ದು, 1 ದಿನ ಅಧಿಕ ಆರಾಧನೆ ಪೂಜೆ ಹಿನ್ನೆಲೆ ಎಲ್ಲವೂ ಒಳಿತಾಗಲಿದೆ. ಅವಘಡಗಳು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More