Mysuru Dasara Mahotsav-2024: ಜಂಬೂ ಸವಾರಿಗೆ 3-ದಿನ ಬಾಕಿ, ಪುಷ್ಪಾರ್ಚನೆ ರಿಹರ್ಸಲ್ನಲ್ಲಿ ಆನೆಗಳು ಭಾಗಿ
Mysuru Dasara Mahotsav-2024: ಪುಷ್ಪಾರ್ಚನೆ ರಿಹರ್ಸಲ್ಗೆ ಮೊದಲು ಪೊಲೀಸ್ ಸಿಬ್ಬಂದಿಯಿಂದ ನಡೆದ ಪಥಸಂಚಲನ ನೆರೆದ ಜನರ ಮೈನವಿರೇಳಿಸಿತು. ಡಿಸಿಪಿ ಮುತ್ತರಾಜ್, ಡಿಸಿಎಫ್ ಮತ್ತು ಸಿಎಅರ್ ಡಿಸಿಪಿ ಹೆಚ್ ಪಿ ಸತೀಶ್ ಮೊದಲಾದ ಆಧಿಕಾರಿಗಳು ಪುಷ್ಪಾರ್ಚನೆ ಕಾರ್ಯವನ್ನು ನೆರವೇರಿಸಿದರು.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮಖ ಆಕರ್ಷಣೆ ಜಂಬೂ ಸವಾರಿಗೆ ಕೇವಲ ಮೂರು ದಿನ ಮಾತ್ರ ಉಳಿದರುವಂತೆಯೇ ಇದರಲ್ಲಿ ಭಾಗಿಯಾಗುವ ಅಭಿಮನ್ಯು ನೇತೃತ್ವದ ಆನೆಗಳು ಇಂದು ಬೆಳಗ್ಗೆ ಅರಮನೆ ಅವರಣದಲ್ಲಿ ಪುಷ್ಪಾರ್ಚನೆ ರಿಹರ್ಸಲ್ ನಲ್ಲಿ ಪಾಲ್ಗೊಂಡವು. ದೃಶ್ಯಗಳಲ್ಲಿ ಕಾಣುವ ಹಾಗೆ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ್ದು ಧನಂಜಯ ಹೆಸರಿನ ಆನೆ. ಉಳಿದ ಆನೆಗಳು ಅವನನ್ನು ಹಿಂಬಾಲಿಸಿ ಕ್ಯಾಪ್ಟನ್ ಅಭಿಮನ್ಯುಗೆ ಪುಷ್ಪಾರ್ಚನೆ ಮಾಡಿದವು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಾವಾ ಹವಾ, ಅರಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ: ಮೈಸೂರು ದಸರಾ 2ನೇ ದಿನ ಕಲರ್ ಫುಲ್