ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಟಾಂಗ್
ಮೈಸೂರು ದಸರಾ ಉದ್ಘಾಟನೆ (Mysuru Dasara Inauguration Row) ಸಂಬಂಧ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ಜೋರಾಗಿದೆ. ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಲೇಖಕಿ ಬಾನು ಮುಷ್ತಾಕ್ (Banu Mushtaq) ವಿರುದ್ಧ ಬಿಜೆಪಿ ನಾಯಕರು ಟೀಕೆಗಳು ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅದರಲ್ಲೂ ಪ್ರತಾಪ್ ಸಿಂಹ (Pratap Simha) ಹೋದಲ್ಲಿ ಬಂದಲ್ಲಿ ಬಾನು ಮುಷ್ತಾಕ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈಗಾಗಲೇ ಬಾನು ಮುಷ್ತಾಕ್, ಚಾಮುಂಡೇಶ್ವರಿ ಕರೆಯಿಸಿಕೊಳ್ಳುತ್ತಿದ್ದಾಳೆ ಎಂದು ಹೇಳುವ ಮೂಲಕ ಸೂಕ್ಷ್ಮವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು. ಇದಕ್ಕೆ ಇದೀಗ ಪ್ರತಾಪ್ ಸಿಂಹ (Pratap Simha) ಪ್ರ ಪ್ರತಿಕ್ರಿಯಿಸಿ, ನೀವು ನಂಬಿರುವ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ. ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಮೈಸೂರು, (ಆಗಸ್ಟ್ 27): ಮೈಸೂರು ದಸರಾ ಉದ್ಘಾಟನೆ (Mysuru Dasara Inauguration Row) ಸಂಬಂಧ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ಜೋರಾಗಿದೆ. ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಲೇಖಕಿ ಬಾನು ಮುಷ್ತಾಕ್ (Banu Mushtaq) ವಿರುದ್ಧ ಬಿಜೆಪಿ ನಾಯಕರು ಟೀಕೆಗಳು ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅದರಲ್ಲೂ ಪ್ರತಾಪ್ ಸಿಂಹ (Pratap Simha) ಹೋದಲ್ಲಿ ಬಂದಲ್ಲಿ ಬಾನು ಮುಷ್ತಾಕ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈಗಾಗಲೇ ಬಾನು ಮುಷ್ತಾಕ್, ಚಾಮುಂಡೇಶ್ವರಿ ಕರೆಯಿಸಿಕೊಳ್ಳುತ್ತಿದ್ದಾಳೆ ಎಂದು ಹೇಳುವ ಮೂಲಕ ಸೂಕ್ಷ್ಮವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು. ಇದಕ್ಕೆ ಇದೀಗ ಪ್ರತಾಪ್ ಸಿಂಹ (Pratap Simha) ಪ್ರ ಪ್ರತಿಕ್ರಿಯಿಸಿ, ನೀವು ನಂಬಿರುವ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ. ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿರುವ ಪ್ರತಾಪ್ ಸಿಂಹ, ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ. ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಮರು ಕೇಳಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡಿದರು. ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಮರು ಕೇಳಿರಲಿಲ್ಲ. ಅದರೂ ಸಿದ್ದರಾಮಯ್ಯ ಮಾಡಿದರು. ಬಾನು ಮುಷ್ತಾಕ್ ಅವರಿಗೆ ನೇರವಾಗಿ ಪ್ರಶ್ನೆ ಕೇಳ್ತೀನಿ. ಜನ ಸಾಹಿತ್ಯ ಭಾಷಣದಲ್ಲಿ ನಿಮ್ಮ ಭಾಷಣ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟನೆಗೆ ಅಪಸ್ವರ: ಟೀಕಾಕಾರರಿಗೆ ಚಾಟಿ ಬೀಸಿದ ಲೇಖಕಿ ಬಾನು ಮುಷ್ತಾಕ್
ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿ ಮೂರ್ತಿ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ. ಭುವನೇಶ್ವರಿಗೆ ಅರಿಶಿನ, ಕುಂಕುಮ ಇಟ್ಟಿದ್ದರಿಂದ ಮುಸ್ಲಿಮರು ಕನ್ನಡ ಕಲಿಯಲು ಆಗಿಲ್ಲ ಎಂದು ಮುಷ್ತಾಕ್ ಹೇಳಿದ್ದು ಸತ್ಯ ತಾನೆ? ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್, ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ? ಅರಿಶಿನ, ಕುಂಕುಮ ಬಗ್ಗೆ ಯಾಕೆ ಬಾನು ಮುಷ್ತಾಕ್‌ಗೆ ತಕರಾರು, ಕಿರಿಕಿರಿ ಇದೆ? ಹಿಂದೂಗಳ ಮನೆಗೆ ಯಾರೇ ಸುಮಂಗಲಿ ಹೋದರೂ ಕುಂಕುಮ ಕೊಡುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದವಾಗಿ ಕೊಡುತ್ತಾರೆ. ಇಂತಹ ಕುಂಕುಮವೇ ಬಾನು ಮುಷ್ತಾಕ್‌ಗೆ ಕಿರಿಕಿರಿ ಉಂಟು ಮಾಡಿದೆ. ಅರಿಶಿನ ಕುಂಕುಮ ಬಗ್ಗೆ ಅವರಿಗೆ ದ್ವೇಷದ ಭಾವನೆ ಇದೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
