Mysuru Dasara: ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಅರಮನೆ ಖಾಸಗಿ ದರ್ಬಾರ್ಗೆ ಪಟ್ಟದ ಆನೆ, ನಿಶಾನೆ ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಈ ವೇಳೆ ಪ್ರಮೋದಾದೇವಿ ಒಡೆಯರ್ ಜೊತೆ ಮೊಮ್ಮಗ ಆದ್ಯವೀರ ಒಡೆಯರ್ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದರು. ಹಾಘೂ ರಾಜಮಾತೆಯವರು ಆನೆಗಳ ಬಗ್ಗೆ ಮೊಮ್ಮಗನಿಗೆ ಮಾಹಿತಿ ತಿಳಿಸಿಕೊಟ್ಟರು.
ಮೈಸೂರು, ಸೆ.23: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಅರಮನೆ ಖಾಸಗಿ ದರ್ಬಾರ್ಗೆ ಪಟ್ಟದ ಆನೆ, ನಿಶಾನೆ ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಪಟ್ಟದ ಆನೆಯಾಗಿ ಕಂಜನ್, ನಿಶಾನೆ ಆನೆಯಾಗಿ ಭೀಮನನ್ನು ಆಯ್ಕೆ ಮಾಡಿದ್ದಾರೆ. ಅರಮನೆ ಆವರಣದಲ್ಲಿ ಪ್ರಮೋದಾದೇವಿ ಅವರು ಆನೆಗಳ ವೀಕ್ಷಣೆ ಮಾಡಿದರು. ಹಾಗೂ ಆನೆಗಳ ಬಗ್ಗೆ ಮೊಮ್ಮಗನಿಗೆ ಮಾಹಿತಿ ನೀಡಿದರು. ಈ ವೇಳೆ ಪ್ರಮೋದಾದೇವಿ ಒಡೆಯರ್ ಜೊತೆ ಮೊಮ್ಮಗ ಆದ್ಯವೀರ ಒಡೆಯರ್ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ