AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್: ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ವೈಭವ!

ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್: ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ವೈಭವ!

ಅಕ್ಷತಾ ವರ್ಕಾಡಿ
|

Updated on: Oct 11, 2026 | 2:26 PM

Share

ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ರಾಜಮನೆತನದ ಯದುವೀರ ಒಡೆಯರ್ ಅವರು ಮೈಸೂರು ಅರಮನೆಯಲ್ಲಿ ಪಾರಂಪರಿಕ ಖಾಸಗಿ ದರ್ಬಾರ್ ನಡೆಸಿದರು. ಕಳಸ ಪೂಜೆ, ಸಿಂಹಾಸನ ಪ್ರದಕ್ಷಿಣೆ ಮತ್ತು ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿ, ರಾಜಗಾಂಭೀರ್ಯದಿಂದ ಚಿನ್ನದ ಸಿಂಹಾಸನಾರೋಹಣ ಮಾಡಿದರು. ಇದು ಮೈಸೂರು ದಸರಾದ ಪ್ರಮುಖ ಆಚರಣೆಯಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆತಿದೆ. ಈ ಸುಸಂದರ್ಭದಲ್ಲಿ, ಮೈಸೂರು ರಾಜಮನೆತನದ ಯದುವೀರ ಒಡೆಯರ್ ಅವರು ಮೈಸೂರು ಅರಮನೆಯಲ್ಲಿ ಪಾರಂಪರಿಕ ಖಾಸಗಿ ದರ್ಬಾರ್ ನೆರವೇರಿಸಿದರು. ದರ್ಬಾರ್ ಆರಂಭಕ್ಕೂ ಮುನ್ನ ಯದುವೀರ ಒಡೆಯರ್ ಅವರು ಕಳಸ ಪೂಜೆಯನ್ನು ನೆರವೇರಿಸಿದರು. ನಂತರ, ದರ್ಬಾರ್ ಹಾಲ್​ಗೆ ರಾಜಗಾಂಭೀರ್ಯ ನಡಿಗೆಯಲ್ಲಿ ಆಗಮಿಸುತ್ತಿದ್ದಂತೆ, “ಬಹುಪರಾಕ್” ಘೋಷಣೆ ಮೊಳಗಿತು. ಒಡೆಯರ್ ಅವರು ಚಿನ್ನದ ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ನಂತರ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಈ ಪೂಜೆಗಳಲ್ಲಿ ನವಗ್ರಹ ಪೂಜೆ ಸೇರಿದಂತೆ ಹಲವು ವಿಧಿಗಳು ಸೇರಿದ್ದವು. ಪೂಜೆಗಳ ಬಳಿಕ ಮಂಗಳಾರತಿ ನೆರವೇರಿಸಿ, ಸಂಪ್ರದಾಯದಂತೆ ಚಿನ್ನದ ಸಿಂಹಾಸನವನ್ನು ಅಲಂಕರಿಸಿದರು. ಈ ಖಾಸಗಿ ದರ್ಬಾರ್, ರಾಜವಂಶದ ಪರಂಪರೆ ಮತ್ತು ದಸರಾ ವೈಭವವನ್ನು ಅನಾವರಣಗೊಳಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More