Mysuru Rains: ಮೈಸೂರಿನಲ್ಲಿ ಭಾರಿ ಗಾಳಿ ಮಳೆ: ಧರೆಗುರುಳಿದ ಮರ, ವಿದ್ಯುತ್ ಕಂಬ
ಮೈಸೂರಿನಲ್ಲಿ ಮತ್ತೆ ಮಳೆ ಅಬ್ಬರಿಸಿದೆ. ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಅನಾಹುತ ಸಂಭವಿಸಿದೆ. ಚಾಮುಂಡಿಪುರಂ ಬಡಾವಣೆಯಲ್ಲಿ 4 ವಿದ್ಯುತ್ ಕಂಬಗಳು ಧೆರೆಗೆ ಉರುಳಿದ್ದು, ನಗರದ ಹಲವು ಪ್ರದೇಶಗಳಲ್ಲಿ ಮರಗಳು ಧರಾಶಾಯಿಯಾಗಿವೆ. ಮೈಸೂರು ಮಳೆ ಅವಾಂತರದ ವಿಡಿಯೋ ಇಲ್ಲಿದೆ.
ಮೈಸೂರು, ಮೇ 9: ಮೈಸೂರಿನಲ್ಲಿ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ (Mysuru Rain) ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಧಾರಾಕಾರ ಮಳೆಗೆ ಮರಗಳು ಧರೆಗುರುಳಿದ್ದು, ಚಾಮುಂಡಿಪುರಂ (Chamundipuram) ಬಡಾವಣೆಯಲ್ಲಿ 4 ವಿದ್ಯುತ್ ಕಂಬಗಳು ಕೂಡ ಧರಾಶಾಯಿಯಾಗಿವೆ. ಚಾಮುಂಡಿಬೆಟ್ಟದ (Chamundi Hills) ಮೆಟ್ಟಿಲು ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಮುರಿದುಬಿದ್ದಿದೆ. ಭಾರಿ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಕೂಡ ಧರೆಗುರುಳಿವೆ.
ಭಾರಿ ಮಳೆ ಬರುತ್ತಿದ್ದ ಕಾರಣ ರಸ್ತೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಭಾರಿ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಮೈಸೂರಿನ ಬಹುತೇಕ ಕಡೆಗಳಲ್ಲಿ ಇಂಥದ್ದೇ ಅನಾಹುತ ಸಂಭವಿಸಿದೆ.
ಇದನ್ನೂ ಓದಿ: ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ಮರ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಬೆನ್ನು ಮೂಳೆ ಮುರಿತ
ಕಳೆದ ಶುಕ್ರವಾರ ಕೂಡ ಮೈಸೂರಿನ ಹಲವು ಕಡೆಗಳಲ್ಲಿ ಗಾಳಿ ಮಳೆಯಿಂದ ಅನಾಹುತ ಸಂಭವಿಸಿತ್ತು. ಸಂಜೆ ವೇಳೆ ಭಾರಿ ಗಾಳಿಯ ಸಹಿತ ಸುರಿದಿದ್ದ ಆಲಿಕಲ್ಲು ಮಳೆಗೆ ಹಲವಾರು ವಾಹನಗಳಿಗೂ ಹಾನಿಯಾಗಿತ್ತು. ಬಸ್ ನಿಲ್ದಾಣದ ಬಳಿ ಹತ್ತಾರು ಮರಗಳು ಧರೆಗೆ ಉರುಳಿದ್ದವು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ