ಚಿಕ್ಕಮಗಳೂರಿನ ತೇಗೂರಲ್ಲಿ ಬೆಳ್ಳಂಬೆಳಗ್ಗೆ ಸಲಗ ಕಂಡು ಗ್ರಾಮಸ್ಥರಲ್ಲಿ ಭೀತಿ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ

ಚಿಕ್ಕಮಗಳೂರಿನ ತೇಗೂರಲ್ಲಿ ಬೆಳ್ಳಂಬೆಳಗ್ಗೆ ಸಲಗ ಕಂಡು ಗ್ರಾಮಸ್ಥರಲ್ಲಿ ಭೀತಿ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2024 | 10:53 AM

ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಅರಣ್ಯಪ್ರದೇಶಕ್ಕೆ ಹತ್ತಿರದ ಗ್ರಾಮಗಳಲ್ಲಿ ಹೀಗೆ ವನ್ಯಜೀವಿಗಳು (wild animals) ಪ್ರವೇಶಿಸುವುದು ಹೊಸ ಸಂಗತಿಯೇನಲ್ಲ. ಅವು ಆಗಾಗ ಬರುತ್ತಿರುತ್ತವೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಅವುಗಳನ್ನು ವಾಪಸ್ಸು ಕಾಡಿಗಟ್ಟುವ ಕೆಲಸ ಮಾಡುತ್ತದೆ.

ಚಿಕ್ಕಮಗಳೂರು: ನಾಗರಹೊಳೆ ಅಭಯಾರಣ್ಯದಲ್ಲಿ ಅಪರೂಪದ ಕಪ್ಪು ಚಿರತೆ (black panther) ಕಾಣಿಸಿದರೆ ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮದಲ್ಲಿ ಒಂಟಿ ಸಲಗವೊಂದು (lone tusker) ಪ್ರತ್ಯಕ್ಷವಾಗಿದೆ. ಟಿವಿ9 ಚಿಕ್ಕಮಗಳೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ತೇಗೂರಿನ ಜಯನಗರ ಬಡಾವಣೆಯಣೆಯಲ್ಲಿ ಮುಂಜಾನೆ ಸಮಯದಲ್ಲಿ ಯುವ ಆನೆಯೊಂದು ನಿರ್ಭೀತಿಯಿಂದ ಓಡಾಡಿದೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಅರಣ್ಯಪ್ರದೇಶಕ್ಕೆ ಹತ್ತಿರದ ಗ್ರಾಮಗಳಲ್ಲಿ ಹೀಗೆ ವನ್ಯಜೀವಿಗಳು (wild animals) ಪ್ರವೇಶಿಸುವುದು ಹೊಸ ಸಂಗತಿಯೇನಲ್ಲ. ಅವು ಆಗಾಗ ಬರುತ್ತಿರುತ್ತವೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಅವುಗಳನ್ನು ವಾಪಸ್ಸು ಕಾಡಿಗಟ್ಟುವ ಕೆಲಸ ಮಾಡುತ್ತದೆ. ತೇಗೂರು ಜನ ತಮ್ಮೂರಲ್ಲಿ ಅನೆ ಕಂಡು ಸಹಜವಾಗೇ ಆತಂಕಗೊಂಡಿದ್ದರು. ಜಯನಗರ ಬಡಾವಣೆ ನಾಯಿಗಳು ಅನೆಯನ್ನು ನೋಡಿ ಒಂದೇ ಸಮ ಬೊಗಳುವುದರ ಜೊತೆಗೆ ಅದನ್ನು ಓಡಿಸುವ ಪ್ರಯತ್ನ ಸಹ ಮಾಡಿದವು. ಆನೆ ನಾಯಿಗಳ ಕಡೆ ತಿರುಗಿದಾಗ ಅವು ದಿಕ್ಕಾಪಾಲಾಗಿ ಓಡಿದವು. ರಸ್ತೆಯಲ್ಲಿದ್ದ ಕೋಳಿಗಳು ಮತ್ತು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಹೆದರಿ ಸರಿದಾಡುವುದನ್ನು ನೋಡಬಹುದು. ಸ್ಥಳೀಯರೊಬ್ಬರು ಮನೆ ಮಾಳಿಗೆ ಹತ್ತಿ ಆನೆಯ ಓಡಾಟವನ್ನು ಸೆರೆಹಿಡಿದಿದ್ದಾರೆ. ಅದನ್ನು ವಾಪಸ್ಸು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಇಬ್ಬರನ್ನು ಬಲಿ ಪಡೆದ ಒಂಟಿ ಸಲಗ ಸೆರೆಗೆ ಸರ್ಕಾರ ಆದೇಶ: ಬೇರೆ-ಬೇರೆ ಶಿಬಿರಗಳಿಂದ ಬಂದ ಗಜಪಡೆ