ಗಣರಾಜ್ಯೋತ್ಸವದಂದು ರಾಜಪತ್ನಲ್ಲಿ ನಡೆಯುವ ಪರೇಡ್ನಲ್ಲಿ ಎನ್ ಸಿ ಸಿ ತಂಡದ ನೇತೃತ್ವವನ್ನು ಮೈಸೂರಿನ ಪ್ರಮೀಳಾ ಕುನಾವರ್ ವಹಿಸುತ್ತಾರೆ!
ಮೈಸೂರಿನ ಸೆಂಟ್ ಜೋಸೆಫ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು ಎನ್ ಸಿ ಸಿ ಯಲ್ಲಿ ಸೀನಿಯರ್ ಆಂಡರ್ ಆಫೀಸರ್ (Senior Under Officer) ಆಗಿದ್ದಾರೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿಯ ಒಟ್ಟು 19 ಕೆಡೆಟ್ಗಳು ಇವರಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ಡೈರೆಕ್ಟೋರೇಟ್ ಪಡೆಯನ್ನು ಪ್ರತಿನಿಧಿಸುತ್ತಿದ್ದಾರೆ.
ಗಣರಾಜ್ಯೋತ್ಸವ (Republic Day) ಸಂಭ್ರಮನ್ನು ಭಾರತ ಎದುರುನೋಡುತ್ತಿದೆ, ಮಂಗಳವಾರ ಕಳೆದು ಬುಧವಾರ ಸೂರ್ಯ ಉದಯಿಸುತ್ತಿರುವಂತೆಯೇ, ರಾಷ್ಟ್ರದೆಲ್ಲೆಡೆ ಸಡಗರ ಶುರುವಾಗುತ್ತದೆ. ದೆಹಲಿಯಲ್ಲಿ ಬುಧವಾರ ಬೆಳಗ್ಗೆ ರಾಜಪತ್ ನಲ್ಲಿ ನಡೆಯುವ ರಿಪಬ್ಲಿಕ್ ಡೇ ಪರೇಡ್ ನಲ್ಲಿ ನಮ್ಮ ಮೈಸೂರು ಹುಡುಗಿ ಪ್ರಮೀಳಾ ಕುನಾವರ ಅವರು ಎನ್ ಸಿ ಸಿ (NCC) ಪಡೆಯ ನೇತೃತ್ವ ವಹಿಸಲಿದ್ದಾರೆ. ಕನ್ನಡಿಗರಿಗೆಲ್ಲ ಹೆಮ್ಮೆಯ ಸಂಗತಿ ಇದು. ಅಂದಹಾಗೆ ಮೈಸೂರಿನ ಸೆಂಟ್ ಜೋಸೆಫ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು ಎನ್ ಸಿ ಸಿ ಯಲ್ಲಿ ಸೀನಿಯರ್ ಆಂಡರ್ ಆಫೀಸರ್ (Senior Under Officer) ಆಗಿದ್ದಾರೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿಯ ಒಟ್ಟು 19 ಕೆಡೆಟ್ಗಳು ಇವರಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ಡೈರೆಕ್ಟೋರೇಟ್ ಪಡೆಯನ್ನು ಪ್ರತಿನಿಧಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಕ್ಯಾಂಪ್ಗಾಗಿ ಭಾರತದ 17 ಡೈರೆಕ್ಟೋರೇಟ್ಗಳಿಂದ ಕೆಡೆಟ್ ಗಳನ್ನು ಆಯ್ಕೆಮಾಡಲಾಗುತ್ತದೆ. ಕ್ಯಾಂಪ್ನಲ್ಲಿ ಇವರು ವ್ಯಾಯಾಮ, ಸಾಂಸ್ಕೃತಿಕ ಚಟುವಟಿಕೆಗಳು, ಫ್ಯಾಗ್ ಏರಿಯಾ ಮತ್ತು ಬೆಸ್ಟ್ ಕೆಡೆಟ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಕೋವಿಡ್-19 ಪಿಡುಗಿನಿಂದಾಗಿ ಕಳೆದ ವರ್ಷ ಮತ್ತು ಈ ವರ್ಷ ಎನ್ ಸಿ ಸಿ ಕ್ಯಾಂಪ್ಗೆ ಆಯ್ಕೆ ಮಾಡುವ ಕೆಡೆಟ್ಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್ ನಿಂದ ಒಟ್ಟು 54 ಕೆಡೆಟ್ಗಳನ್ನು ಆಯ್ಕೆ ಮಾಡಲಾಗಿದ್ದು ಅವರೆಲ್ಲ 2 ತಿಂಗಳ ಹಿಂದೆಯೇ ದೆಹಲಿ ತಲುಪಿಯಾಗಿದೆ. ಎನ್ ಸಿ ಸಿ ಮೈಸೂರು ಗ್ರೂಪ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಎಲ್ಲ ಕೆಡೆಟ್ ಗಳು ಗಣರಾಜ್ಯೋತ್ಸವ ದಿನದ ಪರೇಡ್ ಮತ್ತು ಸ್ಪರ್ಧೆಗಳಿಗಾಗಿ ದೆಹಲಿಯಲ್ಲಿ ಅಭ್ಯಾಸನಿರತರಾಗಿದ್ದಾರೆ.
‘ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್ ಗೆ ಆಯ್ಕೆಯಾಗಿರುವ 54 ಕೆಡೆಟ್ಗಳ ಪೈಕಿ 19 ಕೆಡೆಟ್ಗಳು ಮೈಸೂರು ಗ್ರೂಪ್ ನವರಾಗಿರುವುದು ಹೆಮ್ಮೆಯ ಸಂಗತಿ. ಇದೊಂದು ಆದ್ಭುತವಾದ ಸಾಧನೆ. ಮೈಸೂರು ಕೆಡೆಟ್ಗಳು ಪಡುವ ಪರಿಶ್ರಮ ಮತ್ತು ಉತ್ಸಾಹಕ್ಕೆ ಇದು ಸಾಕ್ಷಿಯಾಗಿದೆ. ಕಳೆದ ಎರಡು ತಿಂಗಳುಗಳಿಂದ ಈ ಕೆಡೆಟ್ ದೆಹಲಿಯಲ್ಲಿದ್ದು ಬೇರೆ ಬೇರೆ ವಿಭಾಗಗಳಲ್ಲಿ ತರಬೇತಿ ಪಡಯುತ್ತಿದ್ದಾರೆ. ಮೈಸೂರು ಗ್ರೂಪ್ ಅತ್ಯಂತ ಗರ್ವ ಮತ್ತು ಹೆಮ್ಮೆಯಿಂದ ಹೇಳಬಯಸುವ ವಿಷಯವೆಂದರೆ ನಮ್ಮ 5 ಮಹಿಳಾ ಕೆಡೆಟ್ಗಳು ರಾಜಪತ್ ನಲ್ಲಿ ಜನೆವರಿ 26 ರಂದು ನಡೆಯುವ ಪರೇಡ್ ಭಾಗವಾಗಲು ಆಯ್ಕೆಯಾಗಿದ್ದು ಪರೇಡ್ ನಲ್ಲಿ ಮಹಿಳಾ ತಂಡದ ನೇತೃತ್ವವನ್ನು ಪ್ರಮೀಳಾ ಕುನಾವರ್ ವಹಿಸಲಿದ್ದಾರೆ,’ ಎಂದು ಮೈಸೂರು ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ; ಅಷ್ಟಕ್ಕೂ ಮುಂದೆ ಆಗಿದ್ದೇನು ಇಲ್ಲಿದೆ ವೈರಲ್ ವಿಡಿಯೋ