AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹೊಳೆ, ಬಂಡೀಪುರದಲ್ಲಿ ಹೆಚ್ಚಿದ ವ್ಯಾಘ್ರಗಳ ಗರ್ಜನೆ: ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!

ನಾಗರಹೊಳೆ, ಬಂಡೀಪುರದಲ್ಲಿ ಹೆಚ್ಚಿದ ವ್ಯಾಘ್ರಗಳ ಗರ್ಜನೆ: ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!

ಅಕ್ಷಯ್​ ಪಲ್ಲಮಜಲು​​
|

Updated on: May 21, 2026 | 10:03 AM

Share

ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅರಣ್ಯ ಇಲಾಖೆಯ ಕಠಿಣ ಕ್ರಮಗಳಿಂದಾಗಿ ವನ್ಯಜೀವಿಗಳಿಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಸಫಾರಿಗೆ ತೆರಳುವ ಪ್ರವಾಸಿಗರಿಗೆ ನಿರಂತರವಾಗಿ ಹುಲಿಗಳ ದರ್ಶನವಾಗುತ್ತಿದೆ. ಇತ್ತೀಚೆಗೆ ನಾಗರಹೊಳೆಯಲ್ಲಿ ಒಂದೇ ಬಾರಿಗೆ ಎರಡು ಹುಲಿಗಳು ಪ್ರವಾಸಿಗರಿಗೆ ಕಾಣಿಸಿ, ವೈರಲ್ ಆಗಿದ್ದು, ಈ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ.

ಮೈಸೂರು, ಮೇ,21: ಪ್ರಕೃತಿ ಪ್ರೇಮಿಗಳು ಹಾಗೂ ವನ್ಯಜೀವಿ ಆಸಕ್ತರಿಗೆ ಒಂದು ಸಂತಸದ ಸುದ್ದಿಯೊಂದು ಇದೆ. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಕಠಿಣ ಸುರಕ್ಷತಾ ಕ್ರಮಗಳು ಮತ್ತು ಪೂರಕ ವಾತಾವರಣದಿಂದಾಗಿ ಈ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ (Increase in Tiger Population) ಕಂಡಿದೆ. ಇದರ ಬೆನ್ನಲ್ಲೇ, ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳ ದರ್ಶನ ಭಾಗ್ಯ ನಿರಂತರವಾಗಿ ಸಿಗುತ್ತಿದೆ. ಇತ್ತೀಚೆಗಷ್ಟೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರಿಗೆ ಅತ್ಯಂತ ಅಪರೂಪದ ಹಾಗೂ ರೋಮಾಂಚನಕಾರಿ ದೃಶ್ಯವೊಂದು ಕಂಡಿದೆ. ಅರಣ್ಯದ ಹಸಿರ ಮಧ್ಯೆ ರಾಜಗಾಂಭೀರ್ಯದಿಂದ ಓಡಾಡುತ್ತಿದ್ದ ಎರಡು ದೊಡ್ಡ ಗಾತ್ರದ ಹುಲಿಗಳು ಏಕಕಾಲದಲ್ಲಿ ಪ್ರವಾಸಿಗರ ಕಣ್ಣಿಗೆ ಬಿದ್ದಿವೆ. ಸಫಾರಿ ವಾಹನವನ್ನು ಕಂಡು ಕಿಂಚಿತ್ತೂ ಹೆದರದೆ, ಈ ಜೋಡಿ ಹುಲಿಗಳು ಪ್ರವಾಸಿಗರ ಕ್ಯಾಮೆರಾಗೆ ಅತ್ಯಂತ ‘ಬಿಂದಾಸ್’ ಆಗಿ ಪೋಸ್ ನೀಡಿವೆ. ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಹುಲಿಗಳ ದರ್ಶನವಾಗುವುದು ಅತ್ಯಂತ ಅಪರೂಪ. ಆದರೆ ಒಂದೇ ಬಾರಿಗೆ ಎರಡು ಹುಲಿಗಳು ಅತ್ಯಂತ ಹತ್ತಿರದಿಂದ ಕಾಣಿಸಿಕೊಂಡು, ಗಂಟೆಗಟ್ಟಲೆ ಪ್ರವಾಸಿಗರ ಕಣ್ಣಮುಂದೆ ವಿಹರಿಸಿದ್ದನ್ನು ಕಂಡು ಸಫಾರಿಯಲ್ಲಿದ್ದ ಪ್ರವಾಸಿಗರು ಅಕ್ಷರಶಃ ಮಂತ್ರಮುಗ್ಧರಾಗಿದ್ದಾರೆ. ತಮ್ಮ ಪ್ರವಾಸದ ಅತ್ಯುತ್ತಮ ಕ್ಷಣಗಳನ್ನು ಪ್ರವಾಸಿಗರು ಮೊಬೈಲ್ ಹಾಗೂ ವೃತ್ತಿಪರ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಂಡಿದ್ದು, ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ನಾಗರಹೊಳೆ ಮತ್ತು ಬಂಡೀಪುರ ಪ್ರವಾಸೋದ್ಯಮಕ್ಕೆ ಈ ವ್ಯಾಘ್ರಗಳ ಸಂಖ್ಯೆ ಹೆಚ್ಚಳವು ಮತ್ತಷ್ಟು ಆನೆಬಲ ತಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More