ಒಳ್ಳೆ ಹುಡುಗ ಪ್ರಥಮ್ ಸಿನಿಮಾಗೆ ವಿಶ್ ಮಾಡಿದ ನಮ್ರತಾ ಗೌಡ

Updated on: Feb 27, 2024 | 8:17 AM

ಒಳ್ಳೆ ಹುಡುಗ ಪ್ರಥಮ್ ‘ಫಸ್ಟ್ ನೈಟ್ ವಿತ್ ದೆವ್ವ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರದ ಕಾರ್ಯಕ್ರಮದಲ್ಲಿ ಬಿಗ್ ಬಾಸ್​ ಸ್ಪರ್ಧಿ ನಮ್ರತಾ ಗೌಡ ಭಾಗಿ ಆಗಿದ್ದಾರೆ. ಅವರು ಸಿನಿಮಾಗೆ ವಿಶ್ ಮಾಡಿದ್ದಾರೆ.

ಒಳ್ಳೆ ಹುಡುಗ ಪ್ರಥಮ್ ಅವರು ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದ ಕಾರ್ಯಕ್ರಮದಲ್ಲಿ ಬಿಗ್ ಬಾಸ್​ ಸ್ಪರ್ಧಿ ನಮ್ರತಾ ಗೌಡ ಭಾಗಿ ಆಗಿದ್ದರು. ಅವರು ಸಿನಿಮಾಗೆ ವಿಶ್ ಮಾಡಿದ್ದಾರೆ. ‘ನಾನು ಸಾಮಾನ್ಯವಾಗಿ ಈವೆಂಟ್​ಗಳಿಗೆ ಹೋಗಲ್ಲ. ನಾನು ಈ ಕಾರ್ಯಕ್ರಮಕ್ಕೆ ಬರೋಕೆ ಕಾರಣ ಪ್ರಥಮ್. ನಾನು ಬಿಗ್ ಬಾಸ್ ಮನೆ ಒಳಗೆ ಇದ್ದಾಗ ಹೊರಗೆ ಸಪೋರ್ಟ್ ಮಾಡಿದವರು ಕಡಿಮೆ. ಈ ರೀತಿ ಬೆಂಬಲಿಸಿದವರಲ್ಲಿ ಪ್ರಥಮ್ (Pratham) ಕೂಡ ಒಬ್ಬರು. ‘ಫಸ್ಟ್​ನೈಟ್ ವಿತ್ ದೆವ್ವ’ ಎಂದಾಗ ಕುತೂಹಲ ಆಯಿತು. ಅವರು ಭಿನ್ನ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು ನಮ್ರತಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More