ಹಾಲಿನ ದರ ಏರಿಕೆಯಾದ್ರೆ ಟೀ, ಕಾಫಿ ದರವೂ ಹೆಚ್ಚಳವಾಗುವ ಸಾಧ್ಯತೆ!

Edited By:

Updated on: Sep 26, 2026 | 12:25 PM

ನಂದಿನಿ ಹಾಲು ಬೆಲೆ ಏರಿಕೆ ಪ್ರಸ್ತಾವನೆಯು ಕರ್ನಾಟಕದಲ್ಲಿ ಕಾಫಿ, ಚಹಾ ಪ್ರಿಯರಿಗೆ ಆತಂಕ ತಂದಿದೆ. ಕೆಎಂಎಫ್ 8-10 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದು, ಇದು ಟೀ, ಕಾಫಿ ಬೆಲೆಯನ್ನು ಹೆಚ್ಚಿಸುವುದು ಖಚಿತ. ಈಗಾಗಲೇ ದುಬಾರಿಯಾದ ಕಾಫಿ, ಚಹಾ ಮತ್ತೆ 20-22 ರೂ. ತಲುಪುವ ಸಾಧ್ಯತೆ ಇದೆ. ಇದು ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.

ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಲೀಟರ್ ಹಾಲಿಗೆ 8 ರಿಂದ 10 ರೂಪಾಯಿಗಳಷ್ಟು ಬೆಲೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬೆಲೆ ಏರಿಕೆಯು ರಾಜ್ಯದ ಲಕ್ಷಾಂತರ ಟೀ ಮತ್ತು ಕಾಫಿ ಪ್ರಿಯರಿಗೆ ದೊಡ್ಡ ಆಘಾತ ನೀಡುವ ಸಾಧ್ಯತೆ ಇದೆ. ಹಾಲಿನ ದರ ಹೆಚ್ಚಳವಾದರೆ, ಹೋಟೆಲ್‌ಗಳು ಅನಿವಾರ್ಯವಾಗಿ ಟೀ ಮತ್ತು ಕಾಫಿ ದರವನ್ನು ಏರಿಕೆ ಮಾಡುತ್ತವೆ. ಸದ್ಯ 15 ರೂಪಾಯಿಗಳ ಆಸುಪಾಸಿನಲ್ಲಿರುವ ಟೀ ಮತ್ತು ಕಾಫಿ ಬೆಲೆ, ಈ ಏರಿಕೆಯ ನಂತರ 20 ರಿಂದ 22 ರೂಪಾಯಿಗಳಿಗೆ ತಲುಪುವ ಸಾಧ್ಯತೆ ಇದೆ. ಇದು ದಿನಕ್ಕೆ ಒಂದೆರಡು ಕಪ್ ಟೀ ಅಥವಾ ಕಾಫಿ ಸೇವಿಸುವ ಸಾಮಾನ್ಯ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಲಿದೆ. ಈಗಾಗಲೇ ಜೀವನೋಪಾಯದ ವೆಚ್ಚಗಳ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈ ಹೊಸ ಹೊರೆ ದೊಡ್ಡ ಸಂಕಷ್ಟ ತರಲಿದೆ.

ಕೇವಲ ಮನವಿಗಳ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳದೆ, ಗ್ರಾಹಕರ ಹಿತದೃಷ್ಟಿಯನ್ನೂ ಪರಿಗಣಿಸಿ ಹಾಲು ಬೆಲೆ ಏರಿಕೆ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಭಿಪ್ರಾಯ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More