ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್
ರಾಮನಗರದ ಜಾನಪದಲೋಕದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ವೈದ್ಯೆ ಡಾ.ಶ್ರೀನಿಧಿ ಜೊತೆ ಸರಳವಾಗಿ ಮಂತ್ರ ಮಾಂಗಲ್ಯ ವಿವಾಹವಾದರು. ಮಂಡ್ಯದ ಕೆ.ಆರ್ ಪೇಟೆ ಮೂಲದ ಡಾ.ಶ್ರೀನಿಧಿ ಅವರನ್ನು ದರ್ಶನ್ ವರಿಸಿದ್ದಾರೆ. ಈ ಮದುವೆಗೆ ಆಗಮಿಸಿದ ನೂತನ ದಂಪತಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದರು.
ರಾಮನಗರ, ನವೆಂಬರ್ 26: ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಡಾ.ಶ್ರೀನಿಧಿ ಅವರೊಂದಿಗೆ ಸರಳ ವಿವಾಹವಾಗಿದ್ದಾರೆ. ರಾಮನಗರದ ಹೊರವಲಯದಲ್ಲಿರುವ ಜಾನಪದಲೋಕದಲ್ಲಿ ಈ ಮದುವೆ ಸಮಾರಂಭ ನಡೆದಿದೆ. ಶಾಸಕ ದರ್ಶನ್ ಅವರು ಯಾವುದೇ ಆಡಂಬರಕ್ಕೆ ಹೋಗದೆ, ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಧು ಡಾ.ಶ್ರೀನಿಧಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಮೂಲದ ವೈದ್ಯೆಯಾಗಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
