‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದ ಬಗ್ಗೆ ಡಾ. ಮಂಜುನಾಥ್ ಮೆಚ್ಚುಗೆ
ಇದೊಂದು ಉತ್ತಮ ಕೆಲಸ. ಇದು ಸಮಾಜಮುಖಿ ಕೆಲಸ ಎಂಬುದು ನನ್ನ ಅಭಿಪ್ರಾಯ. ತೆರೆಮರೆಯಲ್ಲಿ ಇರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಇಷ್ಟುದೊಡ್ಡ ವೇದಿಕೆಯ ಮೇಲೆ ಸನ್ಮಾನ ಮಾಡಿದರೆ ಅವರಿಗೆ ನಾವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಸ್ಫೂರ್ತಿ ಬರುತ್ತದೆ ಎಂದರು ಡಾ. ಮಂಜುನಾಥ್.
ಟಿವಿ9 ಕನ್ನಡ ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದ ಮೂಲಕ ಸಮಾಜದ ನಾನಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡುವ ಕಾರ್ಯ ನಡೆದಿದೆ. ಸಿನಿಮಾ, ಸಂಗೀತ, ಕೃಷಿ ಹೀಗೆ 9 ಕ್ಷೇತ್ರದವರಿಗೆ ಸನ್ಮಾನ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಂಜುನಾಥ್ ಅವರು ಅತಿಥಿಯಾಗಿ ಆಗಮಿಸಿದ್ದರು. ಸಾಧಕರಿಗೆ ಅವರು ಸನ್ಮಾನ ಮಾಡುವ ಕೆಲಸ ಮಾಡಿದರು. ‘ಟಿವಿ9 ಅಭಿಯಾನ ನಿಜಕ್ಕೂ ಅರ್ಥಪೂರ್ಣವಾದದ್ದು. ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಸಾಧಕರಿಗೆ ಪ್ರೇರಣೆ ಕೊಡುವ ಕೆಲಸ ಆಗಿದೆ. ಇದರ ಜತೆಗೆ ಲಕ್ಷಾಂತರ ಮಂದಿಗೆ ಇದರಿಂದ ಸ್ಫೂರ್ತಿ ಸಿಗುತ್ತಿದೆ. ಇದರಿಂದ ನಾವು ಕೂಡ ಸಾಧನೆ ಮಾಡಬೇಕು ಎನ್ನುವ ಹಂಬಲ ಹುಟ್ಟಿಕೊಳ್ಳುತ್ತದೆ. ಇದೊಂದು ಉತ್ತಮ ಕೆಲಸ. ಇದು ಸಮಾಜಮುಖಿ ಕೆಲಸ ಎಂಬುದು ನನ್ನ ಅಭಿಪ್ರಾಯ. ತೆರೆಮರೆಯಲ್ಲಿ ಇರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಇಷ್ಟುದೊಡ್ಡ ವೇದಿಕೆಯ ಮೇಲೆ ಸನ್ಮಾನ ಮಾಡಿದರೆ ಅವರಿಗೆ ನಾವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಸ್ಫೂರ್ತಿ ಬರುತ್ತದೆ’ ಎಂದರು ಡಾ. ಮಂಜುನಾಥ್.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ