AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ

NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ

Vinay Kashappanavar
| Edited By: |

Updated on:Jun 25, 2026 | 2:19 PM

Share

ಮುಖ್ಯಾಂಶಗಳು

  • NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣದ ಆರೋಪ
  • ಬಿಜೆಪಿ ವಿರುದ್ಧ ಮಾಜಿ ಸಚಿವ ಮಧು ಬಂಗಾರಪ್ಪ ಆಕ್ರೋಶ
  • ಮಕ್ಕಳ ಮೇಲೆ ಸೈದ್ಧಾಂತಿಕ ವಿಚಾರ ಹೇರಿಕೆ ಯತ್ನವೆಂದು ಕಿಡಿ

Textbook Controversy: NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣದ ಆರೋಪಗಳ ಕುರಿತು ಮಧು ಬಂಗಾರಪ್ಪ ಧ್ವನಿ ಎತ್ತಿದ್ದಾರೆ. ಕೃಷ್ಣನ ಕುರಿತಾದ ಪಾಠ ಸೇರ್ಪಡೆ, ಸಸ್ಯಾಹಾರದ ಪ್ರಚಾರ, ಪ್ರಾದೇಶಿಕ ಆಯಾಮಗಳ ನಿರ್ಲಕ್ಷ್ಯ, ಮತ್ತು ಮಕ್ಕಳ ಮೇಲೆ ಸೈದ್ಧಾಂತಿಕ ವಿಚಾರಗಳನ್ನು ಹೇರುತ್ತಿರುವುದು ಬಿಜೆಪಿಯ ಕೆಟ್ಟ ಬುದ್ಧಿ ಎಂದು ಆರೋಪಿಸಿರುವ ಅವರು, ಈ ನಡೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜೂನ್​​ 25: ರಾಜ್ಯದಲ್ಲಿ ಎನ್.ಸಿ.ಇ.ಆರ್.ಟಿ (NCERT) ಮತ್ತು ಸಿ.ಬಿ.ಎಸ್.ಇ (CBSE) ಪಠ್ಯಪುಸ್ತಕಗಳಲ್ಲಿ ಕೇಸರೀಕರಣದ ಆರೋಪ ಕೇಳಿಬಂದಿದೆ. ಆರನೇ ತರಗತಿಯ ಕನ್ನಡ ಪಠ್ಯಕ್ಕೆ ಕೃಷ್ಣ ಎಂದು ಹೆಸರು, ಸಮತೋಲನ ಆಹಾರದ ವಿಚಾರದಲ್ಲಿ ಸಸ್ಯಾಹಾರಕ್ಕೆ ಮಾತ್ರ ಪ್ರೋತ್ಸಾಹ ಮತ್ತು ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಕಡೆಗಣಿಸಿರುವ ಬಗ್ಗೆ ಹಲವರು ಧ್ವನಿ ಎತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಜೆಪಿ ಸರಕಾರವು ಮಕ್ಕಳ ಮನಸ್ಸಿನ ಮೇಲೆ ಸೈದ್ಧಾಂತಿಕ ವಿಚಾರಗಳನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅನೇಕ ತಪ್ಪುಗಳು ಕಂಡುಬಂದಿದ್ದವು ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡಿದ್ದಾರೆ. ಮಕ್ಕಳ ಶಿಕ್ಷಣವು ಯಾವಾಗಲೂ ಅವರ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Jun 25, 2026 12:49 PM

Follow Us