‘ಆ ಸಿನಿಮಾ ತೋರಿಸಿ ನನ್ನ ಜೀವನವೂ ಹೀಗೆ ಎಂದು ನೀತು ಹೇಳಿದಳು’; ತಾಯಿ ವನಜಾಕ್ಷಿ
ಸಂಚಾರಿ ವಿಜಯ್ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರ ಹಲವು ವಿಚಾರಗಳ ಬಗ್ಗೆ ಸಮಾಜಕ್ಕೆ ತಿಳಿಸಿತು. ಬಿಗ್ ಬಾಸ್ ಮನೆಯಲ್ಲಿರುವ ನೀತು ಜೀವನವೂ ಇದೇ ರೀತಿಯಲ್ಲಿದೆ.
ಸಂಚಾರಿ ವಿಜಯ್ (Sanchari vijay) ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರ ಹಲವು ವಿಚಾರಗಳ ಬಗ್ಗೆ ಸಮಾಜಕ್ಕೆ ತಿಳಿಸಿತು. ಬಿಗ್ ಬಾಸ್ (Bigg Boss) ಮನೆಯಲ್ಲಿರುವ ನೀತು ಜೀವನವೂ ಇದೇ ರೀತಿಯಲ್ಲಿದೆ. ‘ನಾನು ಅವನಲ್ಲ ಅವಳು’ ಸಿನಿಮಾ ನೀತು ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದೇಹದಲ್ಲಿ ಆದ ಬದಲಾವಣೆ ಬಗ್ಗೆ ಧೈರ್ಯದಿಂದ ಹೇಳಲು ಸಹಕಾರಿ ಆಗಿದ್ದು ಇದೇ ಸಿನಿಮಾ. ಈ ಚಿತ್ರವನ್ನು ತಾಯಿ ವನಜಾಕ್ಷಿಗೆ ನೀತು ತೋರಿಸಿದ್ದರು. ನನ್ನ ಜೀವನವೂ ಇದೇ ರೀತಿ ಇದೆ ಎಂದು ಅವರು ತಾಯಿಗೆ ವಿವರಿಸಿದ್ದರು. ನೀತು ಕಷ್ಟವನ್ನು ಅರ್ಥಮಾಡಿಕೊಂಡು ಅವರ ಬೆಂಬಲಕ್ಕೆ ನಿಂತರು ವನಜಾಕ್ಷಿ. ಈ ಬಗ್ಗೆ ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 20, 2023 08:40 AM
Latest Videos